ಬೇಸಿಗೆಯಲ್ಲಿ ಸನ್ ಬರ್ನ್ ಚಿಂತೆಯೆ? ಹಾಗಾದರೆ ಹೀಗೆ ಮಾಡಿ.
ಬ್ಯೂಟಿ ಟಿ್ಪ್ಸ್: ಸೂಕ್ಷ್ಮ ತ್ವಚೆಯುಳ್ಳವರಿಗೆ ಬೇಸಿಗೆಯಲ್ಲಿ ಸನ್ ಬರ್ನ್ ಆಗುವುದು ಸಾಮಾನ್ಯ. ಅಂಥ ಸಂಧರ್ಭದಲ್ಲಿ ಅರ್ಧ ಕಪ್ ಹಾಲು ,ಅರ್ಧ ಕಪ್ ತಣ್ಣೀರು ಹಾಗೂ ಒಂದು ಚಿಕ್ಕ ಬಟ್ಟಲು ಐಸ್ ಕ್ಯೂಬ್ಗಳನ್ನು ಮಿಶ್ರಣ ಮಾಡಿ , ಕಾಟನ್ ಟವಲನ್ನು ಅದರಲ್ಲಿ ಅದ್ದಿ ಐದರಿಂದ ಹತ್ತು ನಿಮಿಷಗಳವರೆಗೆ ಮುಖದ ಮೇಲಿಟ್ಟುಕೊಂಡು ನಂತರ ಮುಖ ತೊಳೆಯಿರಿ.
ಫೇಸ್ ಪ್ಯಾಕ್ : ಕಡ್ಲೆಹಿಟ್ಟು, ಹೆಸರುಕಾಳಿನ ಹಿಟ್ಟು ಸಮಪ್ರಮಾಣದಲ್ಲಿ ಬೆರೆಸಿ ಮುಖ ಕುತ್ತಿಗೆಗೆ ಹಚ್ಚಿ, ಅರ್ಧ ಗಂಟೆ ನಂತರ ಮುಖ ತೊಳೆದುಕೊಳ್ಳಬೇಕು.
ಮೊಸರಿಗೆ ಗೋಧಿ ತೌಡು ಸೇರಿಸಿ ಮುಖಕ್ಕೆ ಹಚ್ಚಿ 10 ನಿಮಿಷಗಳ ನಂತರ ತೊಳೆದರೆ ಮುಖವು ಕಾಂತಿಯುಕ್ತವಾಗುತ್ತದೆ.
ಎಣ್ಣೆ ತ್ವಚೆಯವರು ಪಪ್ಪಾಯಿ ಪ್ಯಾಕ್ ಹಾಕಿಕೊಳ್ಳಬಹುದು.
ಸಾಮಾನ್ಯ ತ್ವಚೆಯವರು ಕಿತ್ತಳೆ, ಕಲ್ಲಂಗಡಿ ಪ್ಯಾಕ್ ಹಾಕಿಕೊಳ್ಳಬಹುದು.
ಹತ್ತಿ, ಕೈಮಗ್ಗದ ಬಟ್ಟೆಗಳನ್ನು ಧರಿಸುವುದು ಉತ್ತಮ. ಕಪ್ಪು ಉಡುಪುಗಳನ್ನು ಮಾತ್ರ ಧರಿಸಬಾರದು.
ಉತ್ತಮ ಪರಿಮಳಯುಕ್ತ ಸಾಬೂನು ಬಳಸುವುದು ಉತ್ತಮ . ಸಿಕ್ಕ ಸಿಕ್ಕ ಪೌಡರ್ ಹಾಕಬಾರದು ಉತ್ತಮ ಗುಣಮಟ್ಟದ ಪೌಡರ್ ನ್ನು ಬಳಸಬಹುದು.
ಸಾಕಷ್ಟು ಮಜ್ಜಿಗೆ ಕುಡಿಯಬೇಕು. ಜೀರಿಗೆ, ಕೊತ್ತಂಬರಿ, ಪುದೀನಾ,ಮೊಸರು ಇವುಗಳನ್ನು ಆಹಾರದಲ್ಲಿ ರೂಢಿಸಿಕೊಳ್ಳಬೇಕು. ಮುಖ್ಯವಾಗಿ ಬೇಸಿಗೆಯಲ್ಲಿ ಕರಿದ ಪದಾರ್ಥ ಮಸಾಲೆಯುಕ್ತ ಆಹಾರಗಳನ್ನು ಮಿತವಾಗಿ ಬಳಸಬೇಕು.
ಎಣ್ಣೆ ಚರ್ಮದವರು ದಿನಕ್ಕೆ 4-5 ಬಾರಿಯಾದರೂ ಮುಖ ತೊಳೆಯಬೇಕು . ಅದರಲ್ಲಿ 2 ಬಾರಿಯಾದರೂ ಕಡಲೆ ಹಿಟ್ಟಿನಿಂದ ಮುಖ ತೊಳೆಯಬೇಕು.
ಸ್ನ್ಯಾಕ್ಸ್ ಬದಲು ಫ್ರೂಟ್ಸ್ ಸಲಾಡ್ ತಿನ್ನಿರಿ. ದೇಹದ ಉಷ್ಣತೆಗೆ ರಾತ್ರಿ ಮಲಗುವಾಗ ಮೊಸರಿಗೆ ಸಕ್ಕರೆ ಬೆರೆಸಿ ತಿನ್ನಿರಿ. ದೇಹ ತಂಪಾಗಿರುತ್ತದೆ.
ಬೇಸಿಗೆಯಲ್ಲಿ ಹೊರಗೆ ಸುತ್ತಿ ಬಂದ ತಕ್ಷಣ ಮುಖ ತೊಳೆಯಿರಿ, 15 ದಿನಗಳಿಗೊಮ್ಮೆಯಾದರೂ ಸ್ಟೀಮಿಂಗ್ ,ಫೇಶಿಯಲ್ ಮಾಡುವುದು ಉತ್ತಮ.
ಕಡಲೆ ಹಿಟ್ಟಿಗೆ ನಿಂಬೆರಸ ಸೇರಿಸಿ ಪ್ಯಾಕ್ ಹಾಕಿಕೊಂಡು 15 ನಿಮಿಷದ ನಂತರ ಮುಖ ತೊಳೆಯಿರಿ.
ಕಡಲೆ ಹಿಟ್ಟು ಮನೆಯಲ್ಲಿ ಬೀಸಿದ್ದು ಇರಬೇಕು. ಜೇನುತುಪ್ಪ ಎಂದರೆ ಪ್ಯೂರ್ ಆಗಿರಬೇಕು. ಸಾಧಾರಣ ಗುಣಮಟ್ಟದ್ದನ್ನು ಬಳಸಬಾರದು. ಕ್ಲೀನ್ ಪ್ಯಾಕ್ಡ್ ಡಾಬರ್ ಹನಿಯಂತಹದನ್ನು ಬಳಸಬೇಕು.