10 ನಿಮಿಷದ ಸೆಕ್ಸ್ ಚಾಟ್‌ಗೆ 10 ಸಾವಿರ ರೂ. ಪಂಗನಾಮ
ಬೆಂಗಳೂರು: ಮಹಿಳೆಯೊಂದಿಗೆ 10 ನಿಮಿಷಗಳ ಚಾಟ್‌ನಲ್ಲಿ 10,000 ರೂಪಾಯಿಗಳನ್ನು ವ್ಯಕ್ತಿಯೊಬ್ಬ ಕಳೆದುಕೊಂಡಿದ್ದಾನೆ.38 ವರ್ಷದ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು ಆನ್‌ಲೈನ್ ಲೈವ್ ಸೆಕ್ಸ್ ಚಾಟ್ ರೂಮ್‌ನಲ್ಲಿ ಚ ಚಾಟ್ ಮಾಡಿ ಹಣ ಕಳೆದುಕೊಂಡಿದ್ದಾರೆ.
ಕಾಜಲ್ ಎಂದು ಗುರುತಿಸಲಾದ ಆರೋಪಿ ಸಂತ್ರಸ್ತನಿಗೆ ಆಮಿಷವೊಡ್ಡಿ ಚಾಟ್ ಮಾಡುವಾಗ ವಿವಸ್ತ್ರಗೊಳಿಸಿದ್ದಾರೆ. ಫೋನ್ ಕಾಲ್ ಕಟ್ ಮಾಡುವ ಮೊದಲು ಸಂತ್ರಸ್ತನ ಎಲ್ಲಾ ಸಂಪರ್ಕ ವಿವರಗಳನ್ನು ಪಡೆದಿದ್ದಳು. ಸ್ವಲ್ಪ ಸಮಯದ ನಂತರ, ಅವಳು ಮತ್ತೆ ಅವನಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾಳೆ.
ಹಣ ನೀಡದಿದ್ದರೇ ಅವಳು ವೀಡಿಯೊವನ್ನು ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮ ಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದಳು. ಆರೋಪಿಯನ್ನು ಸುಮಾರು 12 ಗಂಟೆಗಳ ಕಾಲ ಬ್ಲಾಕ್ ಮೇಲ್ ಮಾಡಿ ಆಕೆ ನೀಡಿದ ಖಾತೆಗೆ ಹಣ ಕಳುಹಿಸುವಂತೆ ಮಾಡಲಾಗಿತ್ತು. ಮತ್ತೆ ಹಣಕ್ಕಾಗಿ ಬೇಡಿಕೆ ಹೆಚ್ಚಾದಾಗ, ಅವರು ವೈಟ್‌ಫೀಲ್ಡ್ ವಿಭಾಗದ ಬೆಳ್ಳಂದೂರು ಪೊಲೀಸರನ್ನು ಸಂಪರ್ಕಿಸಿ ಆಕೆಯ ವಿರುದ್ಧ ದೂರು ದಾಖಲಿಸಿದ್ದಾರೆ.