ದಾವಣಗೆರೆ: ಇಲ್ಲೊಬ್ಬ್ರು ಅಧಿಕಾರಿ ಪಾಂಡಿಚೇರಿಯಲ್ಲಿ ವೈದ್ಯ ವೃತ್ತಿ ಮಾಡಿದ್ದು, ಅದೇ ಮನೋಧರ್ಮವನ್ನು ಇಟ್ಟುಕೊಂಡು ಐಪಿಎಸ್ ಆಗಿ ಕೆಲಸ ಮಾಡುತ್ತಿದ್ದಾರೆ.. ಎರಡು ವೃತ್ತಿ ಧರ್ಮಗಳು ಒಂದೇ ಎಂದು ಅವರು ಹೇಳುತ್ತಾರೆ.
ಹಾಗಾದ್ರೆ ನೀವು ಆ ಐಪಿಎಸ್ ಅಧಿಕಾರಿ ಯಾರೆಂಬ ಕುತುಹೂಲವಿದ್ದೇ ಇರುತ್ತದೆ..ಅವರೇ ದಾವಣಗೆರೆ ಎಸ್ಪಿ ಡಾ.ಕೆ.ಅರುಣ್. ವೈದ್ಯ ವೃತ್ತಿ ಎಂದರೆ ಸರ್ವಶ್ರೇಷ್ಟ ವೃತ್ತಿ. ವೈದ್ಯರ ಬಳಿ ಬರುವ ರೋಗಿಗಳ ಆರೋಗ್ಯವನ್ನು ಸರಿಪಡಿಸಿ ಅವರನ್ನು ಸಂಪೂರ್ಣ ಗುಣಮುಖರನ್ನಾಗಿ ಮಾಡುವ ಮಹತ್ತರ ಜವಾಬ್ದಾರಿ ವೈದ್ಯರ ಮೇಲಿರುತ್ತದೆ ಎಂದು ವೈದ್ಯ ವೃತ್ತಿಯಲ್ಲಿದ್ದುಕೊಂಡೆ ಐಪಿಎಸ್ ತೇರ್ಗಡೆ ಹೊಂದಿ ಇದೀಗ ದಾವಣಗೆರೆ ಜಿಲ್ಲಾ ಎಸ್ಪಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ಕೆ.ಅರುಣ್ ಹೇಳುತ್ತಾರೆ.
ವೈದ್ಯರ ದಿನಾಚರಣೆ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡ ಅವರು, ನಾನೂ ಕೂಡ ವೈದ್ಯನಾಗಿ ಕೆಲ ಕಾಲ ಸೇವೆ ಮಾಡಿದ ಅನುಭವವಿದೆ. ಮತ್ತು ಆ ವೃತ್ತಿಯಲ್ಲಿ ತುಂಬಾ ತೃಪ್ತಿ ಕಾಣಬಹುದು. ಕೋರೊನಾ ಸಂದರ್ಭದಲ್ಲಿ ವೈದ್ಯರ ಪಾತ್ರ ಎಷ್ಟು ಮಹತ್ವದಾಗಿತ್ತು ಎನ್ನುವುದನ್ನು ನಾವೆಲ್ಲರೂ ನೋಡಿದ್ದೇವೆ. ಆ ರೀತಿ ಕಷ್ಟಪಟ್ಟು ಕೆಲಸ ಮಾಡಿದ ಎಲ್ಲರಿಗೂ ವೈದ್ಯರ ದಿನಾಚರಣೆಯ ಶುಭಾಶಯಗಳು ಎಂದರು.
ಜನರ ಸಹಕಾರದಿಂದ ಇನ್ನೂ ಉತ್ತಮವಾಗಿ ಕೆಲಸ ಮಾಡಲು ವೈದ್ಯರು ಕೂಡ ಪ್ರಯತ್ನ ಮಾಡಲಿ. ಕೆಲ ಬಾರಿ ಜನರು ತಾಳ್ಮೆ ಕಳೆದುಕೊಂಡು ವೈದ್ಯರ ಮೇಲೆ ಹಲ್ಲೆ ಮಾಡಿದ ಪ್ರಸಂಗಗಳು ಇವೆ. ಇದಕ್ಕೆ ಸರ್ಕಾರ ಹಲ್ಲೆ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ. ನನ್ನ ಅನುಭವದಲ್ಲಿ ವೈದ್ಯನಾಗಿದ್ದುಕೊಂಡು ಪೊಲೀಸ್ ಸೇವೆಗೆ ಬಂದಿರುವುದರಿಂದ ಜನರ ಸಮಸ್ಯೆಗಳನ್ನು ಹತ್ತಿರದಿಂದ ನೋಡುವ ಅವಕಾಶ ನನಗೆ ಸಿಕ್ಕಿತು. ವೈದ್ಯನಾಗಿದ್ದ ವೇಳೆ ಜನರ ಸಮಸ್ಯೆಗಳನ್ನು ನಿಧಾನವಾಗಿ ಆಲಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದ ರೀತಿ ಪೊಲೀಸ್ ಇಲಾಖೆಗೆ ಬಂದ ಮೇಲೆ ಜನರ ಸಮಸ್ಯೆ ಆಲಿಸುವ ಅನುಕೂಲವಾಗಿದೆ.
ಪಾಂಡಿಚೇರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿ ಪಡೆದಿರುವ ಡಾ.ಕೆ.ಅರುಣ್, ವೈದ್ಯ ವೃತ್ತಿಯಲ್ಲಿ ರೋಗಿಗಳ ಜೊತೆ ಒಡನಾಡಿದ ಅನುಭವಗಳು ಮರೆಯದ ಕ್ಷಣಗಳು ಅಲ್ಲಿ ಬಡವರು ಮಾತ್ರ ಬರುವುದಿಲ್ಲ. ಸಮಾಜದ ಎಲ್ಲ ವರ್ಗದ ಜನರೂ ಕೂಡ ಚಿಕಿತ್ಸೆಗಾಗಿ ಬರುತ್ತಾರೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
