ಅಂಗವಿಕಲ ಮಗು ಜನನಕ್ಕೆ ಕಾರಣವಾದ ವೈದ್ಯಗೆ 11.10 ಲಕ್ಷ ರೂ. ದಂಡ

ಧಾರವಾಡ: ಅಂಗವಿಕಲ ಮಗು ಜನನಕ್ಕೆ ಕಾರಣವಾದ ಧಾರವಾಡದ ಮಾಳಮಡ್ಡಿಯ ಪ್ರಶಾಂತ ನರ್ಸಿಂಗ್ ಹೋಮ್ನ ಡಾ. ಸೌಭಾಗ್ಯ ಕುಲಕರ್ಣಿ ಅವರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 11.10ಲಕ್ಷ ರೂ. ದಂಡ ವಿಧಿಸಿದೆ.
ಇಲ್ಲಿನ ಶ್ರೀನಗರ ಬಡಾವಣೆಯ ಭಾವಿಕಟ್ಟಿ ಪ್ಲಾಟ್ ನಿವಾಸಿ ಪರಶುರಾಮ ಘಾಟಗೆ ಎಂಬುವವರು ತಮ್ಮ ಪತ್ನಿ ಪ್ರೀತಿ ಅವರನ್ನು ಪ್ರಶಾಂತ ನರ್ಸಿಂಗ್ ಹೋಮ್ನಲ್ಲಿ 2018ರ ಜುಲೈ 12ರಿಂದ 2019ರ ಜನೆವರಿವರೆಗೆ ತಪಾಸಣೆ ನಡೆಸಿದ್ದರು.ಈ ಅವಧಿಯಲ್ಲಿ ಐದು ಬಾರಿ ಸ್ಕ್ಯಾನ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ವೈದ್ಯೆ ಡಾ. ಸೌಭಾಗ್ಯ ಅವರು, ಗರ್ಭದಲ್ಲಿನ ಮಗುವಿನ ಬೆಳವಣಿಗೆ ಚೆನ್ನಾಗಿದೆ ಹಾಗೂ ಮಗು ಆರೋಗ್ಯವಾಗಿದೆ ಎಂದೇ ತಿಳಿಸುತ್ತಿದ್ದರು.
ದೂರುದಾರರ ಪತ್ನಿ ತನ್ನ 9ನೇ ತಿಂಗಳಿನಲ್ಲಿ ಅದೇ ವೈದ್ಯರ ಹತ್ತಿರ ತಪಾಸಣೆಗೆ ಹೋದಾಗ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲು ಅವರು ಸಲಹೆ ನೀಡಿದ್ದರು. ಆದರೆ ಹೆರಿಗೆ ನಂತರ ಅಂಗವಿಕಲ ಹೆಣ್ಣು ಮಗು ಜನಿಸಿದೆ ಎಂದು ದೂರಿನಲ್ಲಿ ತಿಳಿಸಿದ್ದರು.ಈ ಅವಧಿಯಲ್ಲಿ ಐದು ಬಾರಿ ಸ್ಕ್ಯಾನ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ವೈದ್ಯೆ ಡಾ. ಸೌಭಾಗ್ಯ ಅವರು, ಗರ್ಭದಲ್ಲಿನ ಮಗುವಿನ ಬೆಳವಣಿಗೆ ಚೆನ್ನಾಗಿದೆ ಹಾಗೂ ಮಗು ಆರೋಗ್ಯವಾಗಿದೆ ಎಂದೇ ತಿಳಿಸುತ್ತಿದ್ದರು.
ದೂರುದಾರರ ಪತ್ನಿ ತನ್ನ 9ನೇ ತಿಂಗಳಿನಲ್ಲಿ ಅದೇ ವೈದ್ಯರ ಹತ್ತಿರ ತಪಾಸಣೆಗೆ ಹೋದಾಗ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲು ಅವರು ಸಲಹೆ ನೀಡಿದ್ದರು. ಆದರೆ ಹೆರಿಗೆ ನಂತರ ಅಂಗವಿಕಲ ಹೆಣ್ಣು ಮಗು ಜನಿಸಿದೆ ಎಂದು ದೂರಿನಲ್ಲಿ ತಿಳಿಸಿದ್ದರು.
ಜನಿಸಿರುವ ಅಂಗವಿಕಲ ಹೆಣ್ಣು ಮಗುವಿನ ಈವರೆಗಿನ ಚಿಕಿತ್ಸೆ ಹಾಗೂ ಭವಿಷ್ಯದ ಜೀವನ ನಿರ್ವಹಣೆಯನ್ನು ದೃಷ್ಟಿಯಲ್ಲಿಟ್ಟುಕೊಳ್ಳಬೇಕಾದ್ದು ಅಗತ್ಯ. ಈವರೆಗಿನ ವೈದ್ಯಕೀಯ ಖರ್ಚಿಗಾಗಿ 50ಸಾವಿರ, ಓಡಾಟದ ಖರ್ಚಿಗೆ 50ಸಾವಿರ, ಅಂಗವಿಕಲ ಮಗುವಿನ ಪಾಲಕರಿಗೆ ಆಗಿರುವ ಮಾನಸಿಕ ನೋವು ಹಾಗೂ ಹಿಂಸೆಗೆ 2ಲಕ್ಷ ಹಾಗೂ ಮಗುವಿನ ಭವಿಷ್ಯದ ವೈದ್ಯಕೀಯ ಖರ್ಚಿಗೆ 3ಲಕ್ಷ ಹಾಗೂ ಜೀವನ ನಿರ್ವಹಣೆಗೆ 5ಲಕ್ಷ, ಪ್ರಕರಣದ ಖರ್ಚಿಗಾಗಿ 10ಸಾವಿರ ಸೇರಿ ಒಟ್ಟು 11.10ಲಕ್ಷವನ್ನು ತೀರ್ಪು ನೀಡಿ, ಒಂದು ತಿಂಗಳ ಒಳಗಾಗಿ ದೂರುದಾರರಿಗೆ ನೀಡಬೇಕು. ತಪ್ಪಿದಲ್ಲಿ ಆ ಮೊತ್ತದ ಮೇಲೆ ಶೇ 8ರಂತೆ ಬಡ್ಡಿ ಸೇರಿಸಿ ನೀಡಬೇಕು.
ಈ ಒಟ್ಟು ಮೊತ್ತದಲ್ಲಿ 8ಲಕ್ಷವನ್ನು ಮಗುವಿನ ಹೆಸರಿನಲ್ಲಿ ಆಕೆ ವಯಸ್ಕಳಾಗುವವರೆಗೂ ದೂರುದಾರರು ಇಚ್ಛಿಸಿದ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಕಾಯಂ ಠೇವಣಿ ಮತ್ತು ಪರಿಹಾರದ ಸಂಪೂರ್ಣ ಹಣವನ್ನು ಅಂಗವಿಕಲ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಖರ್ಚು ಮಾಡಬೇಕು ಎಂದು ಆಯೋಗ ಸೂಚಿಸಿದೆ.

 
                         
                       
                       
                       
                       
                      