13ನೇ ನಂಬರ್ ಹಾಗೂ ಸಿದ್ದರಾಮಯ್ಯ.! ಏನಿದು ಮರ್ಮ
ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಲಿರುವ ಸಿದ್ದರಾಮಯ್ಯ ಅವರಿಗೂ 13ನೇ ನಂಬರ್ಗೂ ತುಂಬಾ ನಂಟಿದೆ.
ಅಂದ ಹಾಗೆ ಸಿದ್ದರಾಮಯ್ಯ ಅವರು 2013, ಮೇ 13ರಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಪೂರ್ಣಾವಧಿ ಅಧಿಕಾರವನ್ನೂ ಪೂರೈಸಿದ್ದರು. ಸಿದ್ದರಾಮಯ್ಯ ಈವರೆಗೆ 13 ಬಜೆಟ್ ಮಂಡಿಸಿದ್ದಾರೆ.
ಇದೀಗ ಕಳೆದ ಮೇ 10ರಂದು ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮೇ13ರಂದು ನಡೆದು ಕಾಂಗ್ರೆಸ್ 135 ಕ್ಷೇತ್ರಗಳಲ್ಲಿ ಗೆದ್ದು, ಪ್ರಚಂಡ ಬಹುಮತ ಗಳಿಸಿದೆ. ಎರಡನೇ ಬಾರಿಗೆ ಅವರು ಇದೇ 20ರಂದು ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.
ಕಳೆದ ಮೇ 13ರಂದು ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಲಾಗಿದೆ.