ಚನ್ನಗಿರಿ ಗೋಪನಾಳ್ ಗ್ರಾಮದ 14 ಎಕರೆ ಗ್ರಾಮ ಠಾಣಾ ಒತ್ತುವರಿ! ಕ್ರಮಕ್ಕೆ ಆಗ್ರಹಿಸಿ ಮನವಿ
ದಾವಣಗೆರೆ : ಚನ್ನಗಿರಿ ತಾಲ್ಲೂಕಿನ ಹರೋನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಪನಾಳ್ ಗ್ರಾಮದ 14 ಎಕರೆ ಗ್ರಾಮ ಠಾಣವನ್ನು ಬಿಡಿಸಿ ನಿವೇಶನ ರಹಿತ ಹಕ್ಕಿಪಿಕ್ಕಿ ಕುಟುಂಬಕ್ಕೆ ಹಂಚಿಕೆ ಮಾಡುವಂತೆ ಕೋರಿ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಯುವ ಸಂಘಟನೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಗೋಪನಾಳ್ ಗ್ರಾಮದ ಸುಮಾರು 14 ಎಕರೆ ಜಮೀನಿನಲ್ಲಿ ಸುಮಾರು 40-50 ವರ್ಷಗಳಿಂದ ಗ್ರಾಮಸ್ಥರು ವಾಸವಿದ್ದರು. ಕೆಲವು ಕಾರಣಾಂತರಗಳಿಂದ ಅಲ್ಲಿಂದ ಪಕ್ಕದ ಜಮೀನಿನಲ್ಲಿ ವಾಸವಾಗಿರುತ್ತೇವೆ. ಕೆಲವು ವರ್ಷಗಳಿಂದ ಗ್ರಾಮದ ಗ್ರಾಮ ಠಾಣ ಜಮೀನನ್ನು ಒತ್ತುವರೆ ಹಾಗೂ ಕೆಲವರು ಅಕ್ರಮವಾಗಿ ಪಹಣಿಯನ್ನು ಮಾಡಿಸಿಕೊಂಡಿದ್ದಾರೆ.
ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ತಕ್ಷಣ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಹಾಗೂ ಅಕ್ರಮವಾಗಿ ಮಾಡಿರುವ ಪಹಣಿಯನ್ನು ರದ್ದುಗೊಳಿಸಿ, ಪರಿಶೀಲಿಸಿ ನ್ಯಾಯ ಒದಗಿಸಿ ಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಹಕ್ಕಿಪಿಕ್ಕಿ ಜನಾಂಗದವರಾದ ನಾವು ಒಂದೋಂದು ಮನೆಯಲ್ಲಿ 3-4 ಕುಟುಂಬದವರು ವಾಸವಿದ್ದೇವೆ, ನಿವೇಶನದ ಕೊರತೆ ಇರುವುದರಿಂದ ನಿವೇಶನ ರಹಿತರಿರುವ ಕುಟುಂಬದವರಿಗೆ ಈ ಜಮೀನು ಹಂಚಿಕೆ ಮಾಡಿಕೊಡುವುದರ ಜೊತೆಗೆ ಸರ್ಕಾರಿ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿಪುನೀತ್ ಕುಮಾರ್ ಆರ್, ನಂದಕುಮಾರ್, ಶಿವಾನಂದ, ಮಧುರಾಜ್, ಕೃಷ್ಣರೆಡ್ಡಿ, ಏಸುದಾಸ, ರವಿಕುಮಾರ, ರಿವಲ್ಜು, ಬಾಲೇಶ, ಭಾಸ್ಕರ, ಸಾವಂತ್, ಬಿನೋದ, ಗುರೇಶ,
ದಶರಥ, ಪ್ರೇಮ್ ಸಿಂಗ್,
ಕನ್ಯಾ ಕುಮಾರ್, ರಾಹುಲ್ ಇದ್ದರು.
www.garuda voice.com 9740365719