ಪರಿಶಿಷ್ಟ ಜಾತಿ ಹಾಗೂ ಪಂಗಡದವರಲ್ಲಿ ಮನವಿ! ಸ್ವಯಂ ಉದ್ಯೋಗಕ್ಕೆ ಬ್ಯಾಂಕುಗಳು ಸಿಬಿಲ್ ಆಧಾರದಲ್ಲಿ ಸಾಲ ನಿರಾಕರಿಸಿರುವ ದಾಖಲೆ ನೀಡುವಂತೆ ಮನವಿ

ದಾವಣಗೆರೆ: ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಸ್ವಯಂ ಉದ್ಯೋಗಕ್ಕೆ ಬ್ಯಾಂಕುಗಳು ಸಿಬಿಲ್ ಆಧಾರದಲ್ಲಿ ಸಾಲ ನಿರಾಕರಿಸಿರುವ ದಾಖಲೆ ಇದ್ದರೆ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಅಂಜುಕುಮಾರ್ ಪ್ರಕಟಣೆ ಮೂಲಕ ವಿನಂತಿಸಿಕೊ0ಡಿದ್ದಾರೆ.

ಕೇಂದ್ರ, ರಾಜ್ಯ ಸರ್ಕಾರಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆರ್ಥಿಕ ದುರ್ಬಲರ ಪುನಶ್ಚೇತನಕ್ಕಾಗಿ ಹಲವಾರು ಸರ್ಕಾರಿ ಯೋಜನೆಗಳನ್ನು ಜಾರಿಗೊಳಿಸಿವೆ ಮತ್ತು ಜಾರಿಗೊಳಿಸುತ್ತಿದೆ. ಸದರಿ ಯೋಜನೆಗಳಿಗಾಗಿ ಸರ್ಕಾರಗಳು ಸಾವಿರಾರು ಕೋಟಿ ಹಣವನ್ನು ಪ್ರತಿ ಬಜೆಟ್‌ನಲ್ಲೂ ಮೀಸಲಿಟ್ಟಿವೆ. ಆದರೂ ಸರ್ಕಾರಿ ಯೋಜನೆಗಳು 100ರಷ್ಟು ಫಲಪ್ರದವಾಗಿ ಯಶಸ್ವಿಯಾಗುತ್ತಿಲ್ಲ. ಪರಿಶಿಷ್ಟ ಜನರು ಮೂಲತ ಆರ್ಥಿಕ ದುರ್ಬಲರಾಗಿದ್ದು, ಭಾಗಶಃ ಭೂರಹಿತರು ಕೂಲಿ ಕಾರ್ಮಿಕರಾಗಿರುತ್ತಾರೆ. ಇಂಥವರು ಸರ್ವೇಸಾಮಾನ್ಯವಾಗಿ, ಸಂಘ ಸಂಸ್ಥೆಗಳಲ್ಲಿ, ಚಿಕ್ಕಪುಟ್ಟ ಸಾಲ ಪಡೆದು ಸಮಯಕ್ಕೆ ಸರಿಯಾಗಿ ಪಾವತಿಸಿದ ಸಿಬಿಲ್ ರೇಟ್ ನಲ್ಲಿ ವ್ಯತ್ಯಾಸವಾಗಿರುತ್ತದೆ. ಇಂಥವರ ಸರ್ಕಾರದ ಯೋಜನೆಯಲ್ಲಿ ಫಲಾನುಭವಿ ಆಗಬೇಕೆಂದರೆ ಬ್ಯಾಂಕ್‌ಗಳ ಸಹಭಾಗಿತ್ವದಲ್ಲಿ ಸರ್ಕಾರ ಸಹಾಯಧನವನ್ನು ಸ್ವಯಂ ಉದ್ಯೋಗವೆಂದು ನೀಡುತ್ತದೆ. ಆದರೆ ಬ್ಯಾಂಕ್ ನವರು ಸಿಬಿಲ್ ರೇಟ್‌ನಲ್ಲಿ ವ್ಯತ್ಯಾಸವಾಗಿದ್ದರೆ ಅಂತಹ ಫಲಾನುಭವಿಯ ಅರ್ಜಿಯನ್ನು ಸಾಲ ನೀಡಲು ನಿರಾಕರಿಸುತ್ತಾರೆ. ಇದರಿಂದ ಸರ್ಕಾರದ ಯೋಜನೆಗಳು ಸರಿಯಾಗಿ ಫಲಪ್ರದವಾಗುತ್ತಿಲ್ಲ.

ಆದ್ದರಿಂದ ಸದರಿ ವಿಚಾರವಾಗಿ, ಸರ್ಕಾರಗಳು ಪರಿಶಿಷ್ಟರ ಯೋಜನೆಗಳ ಅನುಷ್ಠಾನಕ್ಕೆ ಬ್ಯಾಂಕುಗಳು ಸಿಬಿಲ್ ರೇಟ್ ಆಧಾರದಲ್ಲಿ ನಿರಾಕರಿಸಿದಂತೆ (ಸರ್ಕಾರಗಳು ಪರಿಶಿಷ್ಟರ ಆರ್ಥಿಕ ದುರ್ಬಲತೆಯನ್ನು ಹೋಗಲಾಡಿಸಲು ಸಹಾಯಧನ ನೀಡುವುದು, ಸಾಮಾನ್ಯವಾಗಿ ಆರ್ಥಿಕ ದುರ್ಬಲರು ಅಂದರೆ ಬಿಪಿಎಲ್ ಕಾರ್ಡುದಾರರ ಸಿಬಿಲ್ ರೇಟ್ ಕಡಿಮೆ ಇದ್ದೆ ಇರುತ್ತದೆ), ಮತ್ತು ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಖಾಸಗಿ ಬ್ಯಾಂಕಿನವರಿಗೆ, ಕ್ರೇಡಿಟ್ ಕೋ-ಆಪರೇಟಿವ್ ಸೊಸೈಟಿ ಅವರಿಗೆ, ಡಿಸಿಸಿ ಬ್ಯಾಂಕಿಗೆ ಅನುಕೂಲವಾಗುವಂತೆ ಹೊಸ ನಿಯಮಕ್ಕೆ ಒತ್ತಾಯಿಸಿದರು ಮನವಿ ಸ್ಪಂದಿಸುತ್ತಿಲ್ಲ.

ಹಾಗಾಗಿ ಸದರಿ ವಿಚಾರವಾಗಿ ಹೈಕೋರ್ಟ್ನಲ್ಲಿ (ಪಿಐಎಲ್) ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲು ಉದ್ದೇಶಿಸಿದ್ದು, ಹೈಕೋರ್ಟ್ನಿಂದ ಈ ವಿಚಾರವಾಗಿ ಸರ್ಕಾರಕ್ಕೆ ನಿರ್ದೇಶಿಸುವಂತೆ ಒತ್ತಾಯಿಸುತ್ತಿದ್ದೇನೆ. ಆದ್ದರಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಪ್ರಜ್ಞಾವಂತರು ಹಾಗೂ ವಕೀಲರು ಈ ವಿಚಾರದಲ್ಲಿ ಸಲಹೆ ಸೂಚನೆ ನೀಡುವಂತೆ ವಿನಂತಿಸಿದ್ದಾರೆ. ಈಗಾಗಲೇ ಸರ್ಕಾರದಿಂದ ಸಹಾಯಧನ ಬಿಡುಗಡೆಯಾಗಿ ಸಿಬಿಲ್ ರೇಟಿನ ವ್ಯತ್ಯಾಸದಿಂದ ಬ್ಯಾಂಕುಗಳು ಪರಿಶಿಷ್ಟರಿಗೆ ಸಾಲ ನೀಡುವುದನ್ನು ನಿರಾಕರಿಸಿದ್ದರೆ ಸದರಿ ದಾಖಲೆಗಳನ್ನು ಸಾಮಾಜಿಕ ಕಾರ್ಯಕರ್ತ ಅಂಜುಕುಮಾರ್ ಅವರ 9902258771 ನಂಬರ್ ಗೆ ವಾಟ್ಸಪ್ ಮಾಡಲು ಮನವಿ ಮಾಡಿದ್ದಾರೆ. ಸರಿಯಾದ ದಾಖಲೆ ಒದಗಿಸುವುದರಿಂದ ಹೈಕೋರ್ಟಿನಲ್ಲಿ ಪರಿಶಿಷ್ಟರ ಪರ ವಾದ ಹೋರಾಟಕ್ಕೆ ಜಯ ಸಿಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!