ಟರ್ಕಿ ಭೂಕಂಪದಲ್ಲಿ 2921, ಸಿರಿಯಾದಲ್ಲಿ 1451 ಸಾವು
ಟರ್ಕಿ: ಟರ್ಕಿಯಲ್ಲಿ ಸಂಭವಿಸಿದ ಪ್ರಭಲ ಭೂಕಂಪದಲ್ಲಿ ಇಲ್ಲಿಯವರೆಗೆ 2,921 ಮಂದಿ ಹಾಗೂ ಸಿರಿಯಾದಲ್ಲಿ 1,451 ಜನರು ಮೃತಪಟ್ಟಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಟರ್ಕಿ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಪ್ರಕಾರ, ಕನಿಷ್ಠ 15,834 ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 7,840 ಜನರನ್ನು ರಕ್ಷಿಸಲಾಗಿದೆ.
ಟರ್ಕಿಯ ಪ್ರಮುಖ ನಗರ ಮತ್ತು ಪ್ರಾಂತೀಯ ರಾಜಧಾನಿಯಾದ ಗಾಜಿಯಾಂಟೆಪ್‌ನಿಂದ 33 ಕಿಲೋಮೀಟರ್ ದೂರದಲ್ಲಿ ಹಾಗೂ 17.9 ಕಿ.ಮೀ. ಆಳದಲ್ಲಿ ಸೋಮವಾರ ಮುಂಜಾನೆ 4.17ರ ಹೊತ್ತಿಗೆ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಕೆಲ ಹೊತ್ತಿನ ಬಳಿಕ 7.5 ತೀವ್ರತೆಯ ಭೂಕಂಪವಾಗಿತ್ತು.