2ಎ ವೀಸಲಾತಿ: ಬಸವ ಜಯಮೃತ್ಯುಂಜಯ ಶ್ರೀಗಳಿಂದ ಸರ್ಕಾರಕ್ಕೆ ಕೊನೆಯ ಡೆಡ್ ಲೈನ್

IMG-20220221-WA0013

 

ದಾವಣಗೆರೆ: ಮುಂಬರುವ ಬಜೆಟ್ ಅಧಿವೇಶನಲ್ಲಿ ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2ಎ (2A) ಮೀಸಲಾತಿ ನೀಡಬೇಕು ಇಲ್ಲದಿದ್ದರೆ, ಉಗ್ರಹೋರಾಟ ನಡೆಸಲಾಗುವುದು ಎಂದು ಕೂಡಲ ಸಂಗಮ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಶ್ರೀ ಗಳು ಸರ್ಕಾರಕ್ಕೆ ಕೊನೆಯ ಡೆಡ್‌ಲೈನ್ ನೀಡಿದ್ದಾರೆ.

ಅವರು ಇಂದು ನಗರದ ಗುರುಭವನದಲ್ಲಿ ಕರೆಯಲಾಗಿದ್ದ ಬೆಂಗಳೂರು ಮಹರ‍್ಯಾಲಿಯ ವಾರ್ಷಿಕೋತ್ಸವವನ್ನು ಉದ್ದೇಶಿಸಿ ಮಾತನಾಡುತ್ತಾ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡುತ್ತೇವೆ ಎಂದು ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ನವರು ಮಾತು ಕೊಟ್ಟಿದ್ದರು ಆದರೆ ಅವರು ಅನಿವಾರ್ಯ ಕಾರಣಗಳಿಂದ ಸಿಎಂ ಸ್ಥಾನ ತ್ಯಜಿಸಬೇಕಾಯಿತು ನಂತರ ಬಂದ ಸಿ ಎಂ ಬಸವರಾಜ್ ಬೊಮ್ಮಾಯಿ 2ಎ ಮೀಸಲಾತಿ ನೀಡುತ್ತೇವೆ ಎಂದು ಸಮಯಾವಕಾಶ ಕೋರಿದ್ದರು, ಆದರೆ ಇಲ್ಲಿಯ ತನಕ ಯಾವ ನಿರ್ಧಾರವೂ ಸರ್ಕಾರದಿಂದ ಬಂದಿಲ್ಲ, ಕೊಟ್ಟ ಎಲ್ಲಾ ಗಡುವು ಮುಗಿದಿದೆ. ಸರ್ಕಾರ ತನ್ನ ವಿಳಂಬ ಧೋರಣೆಯನ್ನು ತೋರುತ್ತಿದೆ. ನಮಗೆ ನಂಬಿಕೆ ಇದೆ ಮುಖ್ಯಮಂತ್ರಿಗಳು ನಮಗೆ 2ಎ ಮೀಸಲಾತಿ ನೀಡೇ ನೀಡುತ್ತಾರೆ ಎಂದು ಸರ್ಕಾರಕ್ಕೆ ಮುಂಬರುವ ಬಜೆಟ್ ಅಧಿವೇಶನದವರೆಗೆ ಸಮಯವಿದೆ, ಮುಂಬರುವ ಅಧಿವೇಶನದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿ ಕೊಟ್ಟ ಮಾತನ್ನು ಉಳಿಸಿಕೊಳ್ಳಿ, ಇಲ್ಲದಿದ್ದಲ್ಲಿ ಪಂಚಮಸಾಲಿ ಸಮಾಜದ ಶಾಸಕರ ಸಭೆ ನಡೆಸಿ ಮುಂದೆ ಮತ್ತೇ ತೀವ್ರ ಹೋರಾಟ ಪ್ರಾರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!