ಆರ್ಥಿಕ ಸಂಕಷ್ಟಕ್ಕೆ ನೆರವಾಗಿ ವಿದ್ಯಾಭ್ಯಾಸಕ್ಕೆ 5 ಲಕ್ಷ ನೇರವು ಸಂಸದ ಸ್ಥಾನದ ಆಕ್ಷಾಂಕ್ಷೀತ ಜಿ.ಬಿ.ವಿನಯ್ ಕುಮಾರ್
ದಾವಣಗೆರೆ: ಹರಿಹರ ತಾಲ್ಲೂಕಿನ ಕುಂಬಳೂರು ಗ್ರಾಮದ ಲಕ್ಷ್ಮಿ ಹಾಗೂ ಕೆಂಚಪ್ಪ ದಂಪತಿ ಎಂಬುವವರ ಬಡ ಕುಟುಂಬವು ಸತತ ಮಳೆ ಸುರಿಯುತ್ತಿದ್ದ ಕಾರಣದಿಂದಾಗಿ ಮನೆಗೋಡೆ ಕುಸಿದು ಬಿದ್ದು ಮಗಳ ಸಾವು ಉಂಟಾಗಿತ್ತು. ಈ ಕುಟುಂಬಕ್ಕೆ ವಿನಯ್ ಕುಮಾರ್ ಜಿ. ಬಿ ಇನ್ ಸೈಟ್ಸ್ ಐಎಎಸ್ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು. ಇವರು ಭೇಟಿಕೊಟ್ಟು ಸಾಂತ್ವಾನ ನೀಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ಹೇಳಿದರು.
ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವುದರ ಜೊತೆಗೆ ಇನ್ನೊಬ್ಬ ಮಗನಾದ ಭಾನುಪ್ರಕಾಶ್ ನ ಸಂಪೂರ್ಣ ಓದುಗೆ ಬೆಳ್ಳೂಡಿಯ ಚಂದ್ರಗುಪ್ತ ಮೌರ್ಯ ಪಬ್ಲಿಕ್ ಸ್ಕೂಲ್ ಗೆ ಅವನ ಶಿಕ್ಷಣಕ್ಕೆ 5. ಲಕ್ಷ ಸಹಾಯಧನ ನೀಡಿ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ಎಲ್ ಕೆ ಜಿ ಯಿಂದ ಪಿಯುಸಿ ವರೆಗೂ ವಹಿಸಿಕೊಂಡು, ದಿನಾಂಕ 23 8 2023 ರಂದು ಬೆಳ್ಳೂಡಿಯ ಚಂದ್ರಗುಪ್ತ ಮೌರ್ಯ ಪಬ್ಲಿಕ್ ಶಾಲೆಯಲ್ಲಿ ಎಲ್ ಕೆ ಜಿ ಗೆ ದಾಖಾಲಾತಿ ಮಾಡಿಸಲಾಯಿತು.
ಇವರ ಒಂದು ಸಮಾಜ ಕಾರ್ಯಕ್ಕೆ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರುಗಳಾದ ಶ್ರೀ ಶ್ರೀ ನಿರಂಜನಾನಂದಪುರಿ ಮಹಾ ಸ್ವಾಮೀಜಿ ಯವರು ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಎಸ್.ನಿಂಗಪ್ಪಸರ್, ಸಂಸ್ಥೆಯ ಶೈಕ್ಷಣಿಕ ನೀರ್ದೆಶಕರಾದ ಡಾ.ಶೃತಿ ಇನಾಮ್ ದಾರ್ ಹಾಗೂ ಶಿಕ್ಷಕ ವೃಂದದವರು ಇವರಿಗೆ ತುಂಬು ಹೃದಯದಿಂದ ಸನ್ಮಾನಿಸಲಾಯಿತು. ಈ ಒಂದು ಸಂದರ್ಭದಲ್ಲಿ ವಿನಯ್ ಜಿ.ಬಿ ಸರ್ ರವರು ಮಾತನಾಡಿ ಮಕ್ಕಳಿಗೆ ಶಿಕ್ಷಣ ನೀಡಿದರೆ ಸಮಾಜದಲ್ಲಿ ಉತ್ತಮ ನಾಗರೀಕರಾಗಲು ಸಾಧ್ಯ
ನಾನು ಕೂಡ ಬಹಳ ಕಷ್ಟ ಜೀವನ ಅನುಭವಿಸಿ ನೋವು ಕಂಡಿದ್ದೇನೆ, ಅದನ್ನು ಮನಗಂಡು ಸಮಾಜದಲ್ಲಿ ಮೊದಲು ಶಿಕ್ಷಣ ಕೊಡಿಸಲು ಮುಂದಾಗಿದ್ದೇನೆ. ಮತ್ತೆ ಸಮಾಜದಲ್ಲಿ ಸಾಧ್ಯವಾದಷ್ಟು ಸಮಾಜ ಸೇವೆ ಮಾಡಬೇಕೆಂದು ನನ್ನ ಆಸೆಯಾಗಿದೆ ಎಂದು ಹೇಳಿದರು.