ದಾವಣಗೆರೆಯಲ್ಲಿ 6.99% ರಷ್ಟು ಮತದಾನ, ಪ್ರಥಮಬಾರಿಗೆ ಮತ ಚಲಾಯಿಸಿದ ಯುವ ಮತದಾರರು

ದಾವಣಗೆರೆ: ಮೊದಲ ಬಾರಿ ಮತ ಹಾಕುವ ಅವಕಾಶ ಸಿಕ್ಕಿದೆ.ನಮ್ಮ ಭಾರತದ ಸಂವಿಧಾನದಲ್ಲಿ ಹೇಳಿರುವಂತೆ ಮತದಾನ ನಮ್ಮ ಹಕ್ಕು ಅದನ್ನು ಚಲಾಯಿಸುವ ಮೂಲಕ ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ಯುವಕರು ಮತದಾನ ಮಾಡುವ ಮೂಲಕ ತಮ್ಮ ಜವಾಬ್ದಾರಿ ಏನೆಂಬುದನ್ನು ಅರಿತುಕೊಳ್ಳಬೇಕು.ಯಾವುದೇ ಕಾರಣಕ್ಕೂ ಮತದಾನ ಮಾಡುವುದರಿಂದ ವಂಚಿತರಾಗಬಾರದು.ಈ ಬಾರಿ ಯುವ ಮತದಾರರ ಮತಗಟ್ಟೆ ಸ್ಥಾಪಿಸಲಾಗಿದೆ ಮತಗಟ್ಟೆ ಆಕರ್ಷಕವಾಗಿದೆ.
– ಯುವರಾಜ್ ಎ.ಪಿ
ಎಂಬಿಬಿಎಸ್ ವಿದ್ಯಾರ್ಥಿ.
ಹರಿಹರ ತಾಲೂಕಿನ ಕುಂಬಳೂರು ಮತಗಟ್ಟೆ ಸಂಖ್ಯೆ 42 ರಲ್ಲಿ ರಕ್ಷಿತಾ ಎಂಬ ಯುವತಿ ಮೊದಲ ಮತದಾನದ ಮಾಡಿ ಅನಿಸಿಕೆ ವ್ಯಕ್ತಪಡಿಸಿದರು.