ದಾವಣಗೆರೆಯಲ್ಲಿ ಸಾಕು ನಾಯಿ ಜೊತೆ 777 ಚಾರ್ಲಿ ಚಿತ್ರ ನೋಡಲು ನಿರ್ಬಂಧಿಸಿದ್ದಕ್ಕೆ ಪ್ರತಿಭಟನೆ

ದಾವಣಗೆರೆ: ಶ್ವಾನದ ಕಥೆಯಾಧಾರಿತ 777 ಚಾರ್ಲಿ ಚಲನಚಿತ್ರ ರಾಜಾದ್ಯಂತ ಬಿಡುಗಡೆಯಾಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ದಾವಣಗೆರೆಯಲ್ಲಿ ಭಾನುವಾರವಾದ ಇಂದು ಬೆಳಗಿನ ಪ್ರದರ್ಶನ ನೋಡಲು ಬಂದ ಅಭಿಮಾನಿಯೊಬ್ಬನಿಗೆ ನಿರಾಸೆ ಮೂಡಿದೆ.

ಪುಟಗನಾಳು ಗ್ರಾಮದ ಕೆಂಚ ಎಂಬ ವ್ಯಕ್ತಿ ತನ್ನ ಸಾಕು ನಾಯಿ ಡಯಾನಳೊಂದಿಗೆ ಚಾರ್ಲಿ 777 ಸಿನಿಮಾ ನೋಡಲು ಬಂದಿದ್ದಾನೆ. ಆದರೆ ಗೀತಾಂಜಲಿ ಚಿತ್ರಮಂದಿರಲ್ಲಿ ನಾಯಿ ಹೊರಗೆ ಬಿಟ್ಟು ಬರುವಂತೆ ಸೂಚಿಸಿದ್ದಾರೆ. ಇದರಿಂದ ಬೇಸರಗೊಂಡು ಪ್ರತಿಭಟನೆಗೆ ನಡೆಸಿದ್ದಾನೆ. ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರದಲ್ಲಿ 3 ಟಿಕೆಟ್ ಕಾಯ್ದಿರಿಸಿದ್ದ. ಅದರಂತೆ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ತನ್ನ ಸಾಕು ನಾಯಿಯೊಂದಿಗೆ ಆಗಮಿಸಿದ ವೇಳೆ ಚಿತ್ರಮಂದಿರದ ಸಿಬ್ಬಂದಿ ನಾಯಿಯನ್ನು ಚಿತ್ರಮಂದಿರದೊಳಗೆ ಬಿಡಲು ಒಪ್ಪದೇ ಹೊರಗೆ ಬಿಟ್ಟು ಬರುವಂತೆ ಸೂಚನೆ ನೀಡಿದ್ದಾರೆ.

ಸಾಕುಪ್ರಾಣಿ ಆಧಾರಿತ ಸಿನಿಮಾ ನೋಡಲು ಆತ ತನ್ನ ಪ್ರೀತಿಯ ಸಾಕು ನಾಯಿ ಡಯಾನಳೊಂದಿಗೆ ಬಂದಿದ್ದ. ಮೊದಲು ಸಿನಿಮಾ ಪ್ರೇಕ್ಷಕರಿಗೆ ಸಿಹಿ ಹಂಚಿ ತನ್ನ ನಾಯಿಗೆ ಡಯಾನ 777 ಎಂದು ಹೆಸರಿಸಲು ನಿರ್ಧರಿಸಿದ್ದ. ಆದರೆ ಚಿತ್ರಮಂದಿರದ ಸಿಬ್ಬಂದಿ ಜಿಲ್ಲಾಧಿಕಾರಿಗಳಿಂದ ಪರವಾನಗಿ ತಂದರೆ ಮಾತ್ರ ಒಳಗೆ ಬಿಡುತ್ತೇವೆಂದು ಹೇಳಿದರು. ಇದರಿಂದ ನಿರಾಸೆಗೊಂಡ ಪುಟ್ಟಗನಾಳು ಗ್ರಾಮದ ಕೆಂಚ ಮತ್ತು ಮನೆಯವರು ನಿರಾಸೆಯಿಂದಲೇ ಊರಿಗೆ ವಾಪಾಸ್ಸಾದರು.

 

garudavoice21@gmail.com 9740365719

 

 

Leave a Reply

Your email address will not be published. Required fields are marked *

error: Content is protected !!