ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಕೋತಿಗಳ ಹಾವಳಿ ಕಡಿವಾಣಕ್ಕೆ ಆಗ್ರಹ

ದಾವಣಗೆರೆ : ದಾವಣಗೆರೆ ನಗರದ ರೈಲ್ವೆ ನಿಲ್ದಾಣದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು ಕೋತಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಪ್ರಯಾಣಿಕರು ಮನವಿ ಮಾಡಿದ್ದಾರೆ.
ಕೋತಿಗಳ ಹಾವಳಿಗೆ ಪ್ರಯಾಣಿಕರು ಬೇಸತ್ತಿದ್ದಾರೆ. ಪ್ರತಿನಿತ್ಯ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಕೋತಿಗಳ ಹಿಂಡು ಪ್ರಯಾಣಿಕರ ಲಗೇಜ್‌ಗಳ ಮೇಲೆ ದಾಳಿ ಮಾಡುತ್ತವೆ. ಅಷ್ಟೇ ಅಲ್ಲದೆ ತಿಂಡಿತಿನಿಸುಗಳು ಕಂಡ ಕೂಡಲೇ ಪ್ರಯಾಣಿಕರ ಮೇಲೆ ಮುಗಿಬೀಳುತ್ತವೆ. ರೈಲ್ವೆ ಇಲಾಖೆ ಅಧಿಕಾರಿಗಳು ಕೂಡಲೇ ಗಮನಹರಿಸಬೇಕೆಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.

ಹಿಂಡು ಹಿಂಡಾಗಿ ಆಗಮಿಸುವ ಕೋತಿಗಳನ್ನು ಬೆದರಿಸಿದರೆ ಪ್ರಯಾಣಿಕರ ಮೇಲೆಯೇ ದಾಳಿ ಮಾಡುತ್ತವೆ. ಮಕ್ಕಳು ವಯೋವೃದ್ದರಿಗೆ ಇದರಿಂದ ತೀವ್ರ ತೊಂದರೆ ಯಾಗುತ್ತಿದೆ. ದಾವಣಗೆರೆ ಮಧ್ಯ ಕರ್ನಾಟಕವಾಗಿದ್ದು ವ್ಯಾಪಾರ ಹಾಗೂ ಶಿಕ್ಷಣ ಕೇಂದ್ರವಾಗಿದೆ. ಪ್ರತಿನಿತ್ಯ ರೈಲಿನಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ರೈಲ್ವೆ ಪೊಲೀಸರು ಹಾಗೂ ರೈಲ್ವೆ ಅಧಿಕಾರಿಗಳು ಕೋತಿಗಳ ಹಾವಳಿಗೆ ಕಡಿವಾಣ ಹಾಕಿ ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

 

 garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!