ಸರ್ಕಾರೇತರ ಸಂಸ್ಥೆಗಳು ಕಲೆಗೆ ಪ್ರೋತ್ಸಾಹ ನೀಡ್ತಿರೋದು ಶ್ಲಾಘನೀಯ – ಆಲೋಕ್ ಕುಮಾರ್, ಐಪಿಎಸ್
ಬೆಂಗಳೂರು,೧೯ : ಇಂದು ಬನಶಂಕರಿಯ ಫಿಡೆಲಿಟಸ್ ಸಂಸ್ಥ ವತಿಯಿಂದ ಕಾನ್ಸೋರ್ಟಿಯಂ ಎಂಬ ಕಲಾ ಪ್ರದರ್ಶನವನ್ನ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಐಪಿಎಸ್ ಅಧಿಕಾರಿ ಆಲೋಕ್ ಕುಮಾರ್, ಲಹರಿ ವೇಲು ಹಾಗೂ ಆರ್ಟ್ ಹಿಸ್ಟೋರಿಯನ್ ಡಾ. ಪ್ರಮೀಳಾ ಲೋಚನ್ ಆಗಮಿಸಿದ್ರು. ಇನ್ನು ಕಾರ್ಯಕ್ರಮವನ್ನ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಜೊತೆಗೆ ಚಿತ್ರಕಲೆಗಳು ಹಾಗು ಶಿಲ್ಪಗಳನ್ನ ಪ್ರದರ್ಶಿಸಿದ 10 ಕಲಾವಿದರಿಗೆ ಸನ್ಮಾನ ಮಾಡಲಾಯಿತು.
ಉದ್ಘಾಟನೆ ನಂತರ ಮಾತನಾಡಿದ ಶ್ರೀ ಅಲೋಕ್ ಕುಮಾರ್, ಐಪಿಎಸ್- ಸರ್ಕಾರವೇ ಎಲ್ಲವನ್ನೂ ಮಾಡುತ್ತೆ ಅಂತ ಕಾಯಬೇಡಿ. ನಿಮ್ಮ ಪ್ರಯತ್ನ ನೀವು ಮಾಡಬೇಕು. ಫಿಡಿಲಿಟಸ್ ಗ್ಯಾಲರಿನಂತಹ ಸರ್ಕಾರೇತರ ಸಂಸ್ಥೆಗಳೂ ಕಲಾವಿದರನ್ನು ಪ್ರೋತ್ಸಾಹ ಮಾಡ್ತಿರೋದು ಶ್ಲಾಘನೀಯ. ಇತ್ತೀಚೆಗೆ ಒಟಿಟಿ ಪ್ಲಾಟ್ ಫಾರಂ ನಿಂದ ಎಲ್ಲ ಕಲೆಗಳೂ ನಶಿಸ್ತಾ ಇದೆ. ಇಂತಹ ಸಮಯದಲ್ಲಿ ಇಂತಹ ಕಲಾ ಪ್ರದರ್ಶನಗಳು ಕಲಾವಿದರಿಗೆ ಪ್ರೋತ್ಸಾಹ ನೀಡುತ್ತದೆ
ಲಹರಿ ವೇಲು- ಬ್ಯುಸಿನೆಸ್ ಜೊತೆ ಆರ್ಟ್ ಗೆ ಬೆಂಬಲ ನೀಡ್ತಿರೋದು ತುಂಬಾ ಒಳ್ಳೆಯ ಕೆಲಸ. ಸಂಗೀತ ಕ್ಷೇತ್ರದಲ್ಲಿ ನಿಮ್ಮ ಲಹರಿ ಸಂಸ್ಥೆ ಬೆಳೆದ ರೀತಿಯಲ್ಲಿ ಫಿಡಿಲಿಟಸ್ ಗ್ಯಾಲರಿಯೂ ಬೆಳೆಯಲಿ ಎಂದು ಹಾರೈಸುತ್ತೇನೆ. ಕಲಾವಿದರಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ನಿಮ್ಮ ಜೊತೆ ಎಂದಿಗೂ ನಾವು ಇರ್ತೀವಿ.
ಡಾ. ಪ್ರಮೀಳಾ ಲೋಚನ್- ಶ್ರೀ ಅಚ್ಚುತ್ ಗೌಡ ಅವರು ಕಲಾವಿದರಿಗೆ ಕೊಡುತ್ತಿರುವ ಬೆಂಬಲ ಎಷ್ಟು ಹೊಗಳಿದರೂ ಸಾಲದು. ಈ ಸುಂದರ ಸಂಜೆ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕಲಾವಿದರ ಕಲಾಕೃತಿಗಳಿಗೆ ತುಂಬಾ ಗೌರವ ನೀಡಬೇಕಿದೆ.
ಅಚ್ಚುತ್ ಗೌಡ- ಗ್ಯಾಲರಿ ಪ್ರಾರಂಭವಾದ ಮೊದಲ ದಿನದಿಂದಲೂ ನಾವು ಕಲೆ ಬಗ್ಗೆ ಗೌರವ ಹೊಂದಿದ್ದೇವೆ. ಇಂತಹ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶನ ಮಾಡೋದು ನಮ್ಮ ಸೌಭಾಗ್ಯ. ದೇವರು ಕೊಟ್ಟ ಒಂದು ಅವಕಾಶವನ್ನು ನಾವು ಕಳೆದುಕೊಳ್ಳಬಾರದು.
ಫೋಟೋ ಕ್ಯಾಪ್ಷನ್:
ಫಿಡಿಲಿಟಸ್ ಗ್ಯಾಲರಿಯಲ್ಲಿ ಇಂದು ಸಂಜೆ ಜರುಗಿದ “CONSORTIUM-Art Preceptors of Bengaluru Art Institutions” ಕಾರ್ಯಕ್ರಮ ಹಾಗೂ ವರ್ಚುಯಲ್ ಗ್ಯಾಲರಿಯನ್ನು ಮುಖ್ಯ ಅತಿಥಿಗಳಾದ ಕೆಎಸ್ಆರ್ಪಿ ಎಡಿಜಿಪಿ ಶ್ರೀ ಅಲೋಕ್ ಕುಮಾರ್-ಐಪಿಎಸ್, ಲಹರಿ ಸಂಸ್ಥೆಯ ಎಂಡಿ ಲಹರಿ ವೇಲು, ಖ್ಯಾತ ಕಲಾ ಇತಿಹಾಸಗಾರ್ತಿ ಡಾ. ಪ್ರಮೀಳಾ ಲೋಚನ್ ಹಾಗೂ ಫಿಡಿಲಿಟಸ್ ಕಾರ್ಪ್ ಎಂಡಿ ಶ್ರೀ ಅಚ್ಚತ್ ಗೌಡ ಅವರುಗಳು ಉದ್ಘಾಟಿಸಿದರು.
ಪ್ರಿಯಾಂಕಾ ತಳವಾರ
ಸಾರ್ವಜನಿಕ ಸಂಪರ್ಕ ನಿರ್ವಾಹಕಿ
9845014602