ಅಂತರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮ : 29 ಸಾಧಕ ಮಹಿಳೆಯರಿಗೆ ‘ನಾರಿ ಶಕ್ತಿ ಪುರಸ್ಕಾರ’ ಪ್ರದಾನ

2

ನವದೆಹಲಿ : ‘ಆಜಾದಿ ಕಾ ಅಮೃತ ಮಹೋತ್ಸವ’ದ ಭಾಗವಾಗಿ, ಅಂತರಾಷ್ಟ್ರೀಯ ಮಹಿಳಾ  ದಿನಾಚರಣೆಯ ವಾರಪೂರ್ತಿ ಕಾರ್ಯಕ್ರಮಗಳು 2022 ಮಾರ್ಚ್ 1ರಿಂದ ದೆಹಲಿಯಲ್ಲಿ ಆರಂಭವಾಗಿವೆ. ಮಹಿಳಾ ದಿನಾಚರಣೆ ಪ್ರಯುಕ್ತ ಇಂದು (2022 ಮಾರ್ಚ್ 8) ರಾಷ್ಟçಪತಿ ಭವನದಲ್ಲಿ ನಡೆಯುತ್ತಿರುವ ವಿಶೇಷ ಸಮಾರಂಭದಲ್ಲಿ ರಾಷ್ಟçಪತಿ ರಾಮ್‌ನಾಥ್ ಕೋವಿಂದ್ ಅವರು 29 ಸಾಧಕ ಮಹಿಳೆಯರಿಗೆ 2020 ಮತ್ತು 2021ನೇ ಸಾಲಿನ ‘ನಾರಿ ಶಕ್ತಿ ಪುರಸ್ಕಾರ’ ಪ್ರದಾನ ಮಾಡಲಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಸೋಂಕು ಸೃಷ್ಟಿಸಿರುವ ಪ್ರಸ್ತುತ ಪರಿಸ್ಥಿತಿಯಿಂದಾಗಿ 2020ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವನ್ನು 2021ರಲ್ಲಿ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಬಾರಿ 2020 ಮತ್ತು 2021ನೇ ಸಾಲಿನ ‘ನಾರಿ ಶಕ್ತಿ ಪುರಸ್ಕಾರ’ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿ ಪುರಸ್ಕೃತರ ಪ್ರಯತ್ನಗಳು ಮತ್ತು ಸಾಧನೆಗಳನ್ನು ಶ್ಲಾಘಿಸಲು, ಮಹಿಳಾ ಸಬಲೀಕರಣಕ್ಕೆ ಸಂಬAಧಿಸಿದ ಕ್ಷೇತ್ರಗಳಲ್ಲಿ ಮತ್ತಷ್ಟು ಕೆಲಸ ಮಾಡುವಂತೆ ಪ್ರೆರೇಪಿಸಲು ಮತ್ತು ಉತ್ತಮ ಸಾಧನೆ ಮಾಡುವಂತೆ ಜನಸಾಮಾನ್ಯರನ್ನು ಪ್ರೆರೇಪಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಲಿದ್ದಾರೆ. ಒಟ್ಟಾರೆ, 28 ಪ್ರಶಸ್ತಿಗಳನ್ನು (2020 ಮತ್ತು 2021ನೇ ಸಾಲಿನಲ್ಲಿ ತಲಾ 14 ಪ್ರಶಸ್ತಿಗಳು) 29 ವ್ಯಕ್ತಿಗಳಿಗೆ, ವಿಶೇಷವಾಗಿ ದುರ್ಬಲ ಮತ್ತು ನಿರ್ಲಕ್ಷಿತ ಮಹಿಳೆಯರ ಸಬಲೀಕರಣಕ್ಕಾಗಿ ವಿಶಿಷ್ಟ ಸೇವೆ ಸಲ್ಲಿಸಿರುವ ಸಾಧಕರ ಅಸಾಧಾರಣ ಕೆಲಸ ಗುರುತಿಸಿ, ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತಿದೆ.  ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು, ಸಾಮಾಜಿಕ ವ್ಯವಸ್ಥೆಯನ್ನು ಸನ್ಮಾರ್ಗಕ್ಕೆ ಕೊಂಡೊಯ್ಯಲು ಅಸಾಧಾರಣ ಕೊಡುಗೆ ನೀಡುವ ಅಸಾಮಾನ್ಯ ಮಹಿಳೆಯರು ಮತ್ತು ಸಂಸ್ಥೆಗಳನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸಲು ಈ ಪ್ರಶಸ್ತಿ ನೀಡಲಾಗುತ್ತದೆ. ಕನಸುಗಳನ್ನು ನನಸಾಗಿಸಲು ವಯಸ್ಸು, ಭೌಗೋಳಿಕ ಅಡೆತಡೆಗಳು ಅಥವಾ ಸಂಪನ್ಮೂಲಗಳು ಈ ಸಾಧಕರಿಗೆ ಅಡ್ಡಿಯಾಗಿಲ್ಲ. ಅವರ ಅದಮ್ಯ ಮನೋಭಾವವು ಸಮಾಜವನ್ನು ಮತ್ತು ವಿಶೇಷವಾಗಿ ಯುವ ಭಾರತೀಯ ಮನಸ್ಸುಗಳನ್ನು ಲಿಂಗ ಅಸಮಾನತೆ ಮತ್ತು ತಾರತಮ್ಯದ ವಿರುದ್ಧ ನಿಲ್ಲಲು ಪ್ರೆರೇಪಿಸುತ್ತಿದೆ. ಈ ಪ್ರಶಸ್ತಿಗಳು ಸಮಾಜದ ಪ್ರಗತಿಯಲ್ಲಿ ಮಹಿಳೆಯರನ್ನು ಸಮಾನ ಪಾಲುದಾರರನ್ನಾಗಿ ಗುರುತಿಸುವ ಪ್ರಾಮಾಣಿಕ ಪ್ರಯತ್ನವಾಗಿದೆ.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!