ಜನರ ಮೇಲೆ ಕಾರು ಚಲಾಯಿಸಿದ ಎಂಎಲ್‌ಎಗೆ ಬೆನ್ನತ್ತಿ ಹಿಗ್ಗಾಮುಗ್ಗ ಥಳಿಸಿದ ಸಾರ್ವಜನಿಕರು
ಭುವನೇಶ್ವರ : ಶಾಸಕನೊಬ್ಬ ಜನರ ಮೇಲೆ ಕಾರು ಹರಿಸಿ 22 ಮಂದಿಗೆ ಗಾಯಗೊಳ್ಳುವಂತೆ ಮಾಡಿದ್ದಾರೆ. ಈ ವೇಳೆ ಸ್ಥಳೀಯರು ಒಟ್ಟಾಗಿ ಶಾಸಕನನ್ನು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಕೊರ್ದಾ ಜಿಲ್ಲೆಯ ಬಾನ್‌ಪುರ್ ಬ್ಲಾಕ್ ಕಛೇರಿಯ ಬಳಿ ನಡೆದಿದೆ. ಚಿಲಿಕಾ ಶಾಸಕ ಪ್ರಶಾಂತ್ ಜಗದೇವ್ ತಮ್ಮ ವಾಹನವನ್ನು ಜನರ ಮೇಲೆ ಹರಿಸಿದ್ದಾರೆ. ಈ ವೇಳೆ ಏಳು ಮಂದಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಕನಿಷ್ಠ 22 ಜನರು ಗಾಯಗೊಂಡಿದ್ದಾರೆ. ಬಾನ್‌ಪುರ ಬ್ಲಾಕ್ ಕಚೇರಿ ಬಳಿ ಬ್ಲಾಕ್ ಅಧ್ಯಕ್ಷರ ಆಯ್ಕೆ ನಡೆಯುತ್ತಿತ್ತು. ಈ ವೇಳೆ ಬ್ಲಾಕ್ ಕಚೇರಿಯಲ್ಲಿ ಹಲವರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಪ್ರಶಾಂತ್ ಜಗದೇವ್ ಜನರ ಮೇಲೆ ವಾಹನ ಹರಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನೆಯ ನಂತರ ಆಕ್ರೋಶಗೊಂಡ ಸ್ಥಳೀಯರು ಪ್ರಶಾಂತ್ ಜಗದೇವ್ ಮೇಲೆ ಹಲ್ಲೆ ನಡೆಸಿದ್ದು, ಜಗದೀಶ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಖೋರ್ಧಾ ಪೊಲೀಸ್ ವರಿಷ್ಠಾಧಿಕಾರಿ ಅಲೆಖ್ ಚಂದ್ರ ಪಾಹಿ ತಿಳಿಸಿದ್ದಾರೆ.