ಸಿಎಂ ಹೊನ್ನಾಳಿಗೆ ಬಂದ್ರೆ ನನ್ನ ಕ್ಷೇತ್ರ ಬಿಟ್ಟುಕೊಡಲು ಸಿದ್ದ :ಎಂಪಿಆರ್

1

ದಾವಣಗೆರೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧಾರಿಸುತ್ತದೆ. ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇದೆ. ಅವರು ಹೊನ್ನಾಳಿಗೆ ಬಂದರೆ ನನ್ನ ಕ್ಷೇತ್ರ ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಎಂ.ಪಿ. ರೇಣುಕಾಚಾರ್ಯ, ಸಚಿವ ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ. ಸಿಎಂ ಯಾರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವುದು, ಬಿಡುವುದು ಹೈಕಮಾಂಡ್ ಜತೆ ಚರ್ಚಿಸಿ ನಿರ್ಧರಿ ಸುತ್ತಾರೆ. ನಾನು ಹೇಳುವ ರೀತಿ ಸಂಪುಟ ಪುನಾರಚನೆ ಆಗಲ್ಲ. ಸಚಿವನಾಗುವ ಯಾವುದೇ ವ್ಯಕ್ತಿಗೆ ಸಾಕಷ್ಟು ಕಾಲಾವಕಾಶ ಬೇಕು. ಗ್ರಾಮ ಪಂಚಾಯತ್ ಅಧ್ಯಕ್ಷರ ರೀತಿ ಪದೇಪದೆ 3-6 ತಿಂಗಳಿಗೆ ಬದಲಾಯಿಸಬಾರದು. ವರ್ಷಕ್ಕೊಮ್ಮೆ ಸಚಿವರು ಬದಲಾದರೆ ಕೆಲಸ ಮಾಡೋದು ಕಷ್ಟ ಎಂದರು.

ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್ ಮಾಡಬೇಕು. ಹಿಂದೂ ಯುವಕರ ಕೊಲೆ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಸಿಎಂ ಜತೆ ಮಾತನಾಡಿದ್ದೇನೆ. ಹರ್ಷನ ಕೊಲೆ ಆರೋಪಿಗಳಿಗೆ ಎನ್‌ಕೌಂಟರ್ ಮಾಡಬೇಕು ಎಂದರು. ನ್ಯಾಯಾಧೀಶರಿಗೆ ಪ್ರಾಣ ಬೆದರಿಕೆ ಒಡ್ಡುತ್ತಾರೆ ಅಂದರೆ ಸಾಮಾನ್ಯರ ಗತಿಯೇನು?. ಇದು ಪಾಕಿಸ್ತಾನ ಅಂದು ಕೊಂಡಿದ್ದಾರೆ. ಹುಷಾರ್ ಇದೆಲ್ಲ ಇಲ್ಲಿ ನಡೆಯಲ್ಲ. ಇದು ಭಾರತ ದೇಶ. ಇಲ್ಲಿ ಎಲ್ಲರೂ ಕಾನೂನನ್ನು ಗೌರವಿಸಬೇಕು. ಕೇಂದ್ರ, ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದು, ಬೆದರಿಕೆ ಹಾಕಿ ದವರನ್ನು ಮಟ್ಟ ಹಾಕುತ್ತೇವೆ. ಯುಪಿ ಮಾದರಿಯಲ್ಲಿ ರಾಜ್ಯದಲ್ಲಿ ಸಿಎಂ ಕಠಿಣ ಕಾನೂನು ಜಾರಿಗೊಳಿಸುತ್ತಾರೆ. ಈಗಾಗಲೇ ಮಾಜಿ ಸಿಎಂ ಬಿಎಸ್‌ವೈ ವಿವಿಧ ಕಾನೂನು ಜಾರಿಗೆ ತಂದಿದ್ದರು ಎಂದರು. ಭಗವದ್ಗೀತೆ ಅಧ್ಯಯನದಿಂದ ಮಕ್ಕಳ ಮನಃಪರಿವರ್ತನೆಯಾಗಲಿದೆ. ಕೇವಲ ಪ್ರಚಾರ ಸ್ವಾರ್ಥ, ರಾಜಕಾರಣಕ್ಕಾಗಿ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುತ್ತಿಲ್ಲ. ಬದಲಾಗಿ ಭಗವದ್ಗೀತೆ ಅಧ್ಯಯನದಿಂದ ಮಕ್ಕಳ ಮನಃಪರಿವರ್ತನೆ ಆಗುತ್ತದೆ. ಇದಕ್ಕಾಗಿ ಸಿಎಂ ಅವರನ್ನು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!