ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಕಲಾತಂಡಗಳ ಸಾಥ್

sammelana4

ದಾವಣಗೆರೆ: ದಾವಣಗೆರೆ ಸಮೀಪದ ಎಲೇಬೇತೂರಿನಲ್ಲಿಂದು ಆಯೋಜಿಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನ ಜನಮನಸೂರೆಗೊಂಡಿತು. ಎತ್ತ ನೋಡಿದರು ಕನ್ನಡದ ಬಾವುಟಗಳ ಮೆರುಗು ಊರಿನ ತುಂಬೆಲ್ಲಾ ಕನ್ನಡದ ಕಲರವ ಅದಕ್ಕೆ ಸಾಥ್ ನೀಡಿದ್ದು ಕಲಾತಂಡಗಳಾದ ಡೊಳ್ಳು ಕುಣಿತ, ಹಗಲು ವೇಷ, ಬೊಂಬೆ ಮೇಳ, ಯಕ್ಷಗಾನ. ಕಣ್ಣು ಹಾಯಿಸಿದಷ್ಟು ಜನಸಮೂಹ ಇದೆಲ್ಲಾ ಕಂಡು ಬಂದಿದ್ದು ದಾವಣಗೆರೆ ಜಿಲ್ಲಾ 11ನೇ ಸಾಹಿತ್ಯ ಸಮ್ಮೇಳನದಲ್ಲಿ.

ಸಮ್ಮೇಳನಾಧ್ಯಕ್ಷರಾದ ಶ್ರೀಮತಿ ಜಿ.ಎಸ್ ಸುಶೀಲಾದೇವಿಯವರ ಮೆರವಣಿಗೆ ಗ್ರಾಮದಾದ್ಯಂತ ಸಾಗಿತು. ಮೆರವಣಿಗೆಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಚಾಲನೆ ನೀಡಿದರು. ಅದಕ್ಕೂ ಮುನ್ನ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ.ವಾಮದೇವಪ್ಪನವರು ಕನ್ನಡ ಫಲಕ ನೀಡುವ ಮೂಲಕ ಸಮ್ಮೇಳನಾಧ್ಯಕ್ಷರಿಗೆ ಸ್ವಾಗತ ಕೋರಿದರು. ಸಾರೋಟಿನಲ್ಲಿ ಸಾಗಿದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಎಲೇಬೇತೂರಿನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಸಮ್ಮೇಳನಾಧ್ಯಕ್ಷರ ಪಲ್ಲಕ್ಕಿಯ ಹಿಂದೆ ಅಲಂಕೃತ ಎತ್ತಿನ ಬಂಡಿಗಳ ಸಾಲು ಮೆರವಣಿಗೆಯ ಸೊಬಗು ಹೆಚ್ಚಿಸಿದವು. ಮೆರವಣಿಗೆಗಿಂತ ಮೊದಲು ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಎಲೆಬೇತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಸಿ. ಸುಮಾ ವಿರೂಪಾಕ್ಷಪ್ಪ ರಾಷ್ಟ ಧ್ವಜಾರೋಹಣ ಮಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ಅವರು ಪರಿಷತ್ತಿನ ಧ್ವಜಾರೋಹಣ ಮಾಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮೇಜರ್ ಡಾ, ಹರ್ಷ ಕೆ.ಬಿ. ನಾಡ ಧ್ವಜಾರೋಹಣ ಮಾಡಿದರು. ಸಿ.ಕೆ. ರುದ್ರಾಕ್ಷಿಬಾಯಿ, ಬೆಳಕು ಜಾನಪದ ಕಲಾ ತಂಡದವರು ರಾಷ್ಟಗೀತೆ, ನಾಡಗೀತೆ ಹಾಡಿದರು.

Leave a Reply

Your email address will not be published. Required fields are marked *

error: Content is protected !!