ಪಾಲಿಕೆಯ ಖರ್ಚುವೆಚ್ಚ ಲೆಕ್ಕಾಚಾರ ಯಾವ ರೀತಿ ಇದೆ ಗೊತ್ತಾ! ಬಂಡವಾಳ ಅನುದಾನಗಳು/ವಿಶೇಷ ಅನುದಾನಗಳು

palike

ದಾವಣಗೆರೆ: ನಗರಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಯುವಜನರ ಕೌಶಲ್ಯಾಭಿವೃದ್ದಿ, ಜೀವನೋಪಾಯ ಅಭಿವೃದ್ಧಿ ಇತ್ಯಾದಿಗಳನ್ನು ವಿಶೇಷವಾಗಿ ಗಮನದಲ್ಲಿರಿ ಸಿಕೊಂಡು ಸದರಿ ಉದ್ದೇಶಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೇಂದ್ರ ಹಣಕಾಸು ಆಯೋಗ ಇತ್ಯಾದಿ ವಿಶೇಷ ಅನುದಾನಗಳನ್ನು ನೀಡುತ್ತಿದ್ದು ಸದರಿ ಆರ್ಥಿಕ ವರ್ಷದಲ್ಲಿ ಈ ಕೆಳಕಂಡ0ತೆ ಅನುದಾನಗಳು ಬಿಡುಗಡೆಯಾಗುವ ಅಂದಾಜು ಮಾಡಲಾಗಿದೆ.

15ನೇ ಕೇಂದ್ರ ಹಣಕಾಸು ಆಯೋಗದ ಅನುದಾನ:
15ನೇ ಕೇಂದ್ರ ಹಣಕಾಸು ಆಯೋಗವು ಕೇಂದ್ರ ಸರ್ಕಾರವು ಸಂಗ್ರಹಿಸುವ ತೆರಿಗೆಗಳಲ್ಲಿ ರಾಜ್ಯ ಸರ್ಕಾರಗಳು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ವರ್ಗಾಯಿಸಬೇಕಾದ ಅನುದಾನದ ಬಗ್ಗೆ ಶಿಫಾರಸು ಮಾಡಿದ್ದು, ಸದರಿ ಅನುದಾನವನ್ನು ಸರಕಾರದ ಮಾರ್ಗಸೂಚಿಗಳಂತೆ ಘನ ತ್ಯಾಜ್ಯ ವಿಲೇವಾರಿ, ಉದ್ಯಾನವನಗಳ ಅಭಿವೃದ್ಧಿ ಮತ್ತು ನಿರ್ವಹಣೆ, ಬೀದಿ ದೀಪಗಳ ಅಭಿವೃದ್ಧಿ, ಲೆಕ್ಕಪತ್ರಗಳ ನಿರ್ವಹಣೆ, ಸಾಮೂಹಿಕ/ಸಾರ್ವಜನಿಕ ಶೌಚಾಲಯ, ಕುಡಿಯುವ ನೀರಿನ ಕಾಮಗಾರಿಗಳು, ಒಳಚರಂಡಿ ಕಾಮಗಾರಿಗಳು, ರಸ್ತೆ & ಸೇತುವೆಗಳ ನಿರ್ವಹಣೆ, ಒಳಚರಂಡಿ ಮತು  ತೆರೆದ ಚರಂಡಿ ಹಾಗೂ ನೀರು ಸರಬರಾಜು ವ್ಯವಸ್ಥೆ ಮುಂತಾದ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಲು, 2022-23ನೇ ಸಾಲಿಗೆ ರೂ. 2580.00 ಲಕ್ಷಗಳು ನಿಗಧಿಪಡಿಸಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗಿದೆ.

ರಾಜ್ಯ ಹಣಕಾಸು ಆಯೋಗದ ವಿಶೇಷ ಅನುದಾನ:
ರಾಜ್ಯ ಹಣಕಾಸು ಆಯೋಗವು ಹಿಂದಿನ ಸಾಲಿನಲ್ಲಿ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರಕ್ಕೆ ರೂ. 500.00 ಲಕ್ಷಗಳ ಅನುದಾನವನ್ನು ಹಂಚಿಕೆ ಮಾಡಿದ್ದು, 2022-23ನೇ ಆರ್ಥಿಕ ವರ್ಷದಲ್ಲಿ ರೂ. 500.00 ಲಕ್ಷಗಳ ಅನುದಾನದ ಬಿಡುಗಡೆಯನ್ನು ನಿರೀಕ್ಷಿಸಲಾಗಿದ್ದು, ಸದರಿ ಅನುದಾನದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!