Inspector Transfer: ರಾಜ್ಯದ 179 ಇನ್ಸ್ಪೆಕ್ಟರ್ ಗಳನ್ನ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯದ ವಿವಿಧ ಠಾಣೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 179 ಇನ್ಸ್ಪೆಕ್ಟರ್ ಗಳನ್ನ ಎಪ್ರಿಲ್ 23 ರಂದು ವರ್ಗಾವಣೆಗೊಳಿಸಿ ಆದೇಶಿಸಿದೆ.
 
 
ದಾವಣಗೆರೆಯ ಮಹಿಳಾ ಪೊಲೀಸ್ ಠಾಣೆಗೆ ಮಲ್ಲಮ್ಮ ಚೌಭೆ, ದಾವಣಗೆರೆ ಮಹಿಳಾ ಠಾಣೆಯಿಂದ ಶಿಲ್ಪ ಅವರನ್ನ ತುಮಕೂರು ಮಹಿಳಾ ಠಾಣೆಗೆ ವರ್ಗಾಯಿಸಲಾಗಿದೆ.

ಶ್ರೀ ಶೈಲ ಚೌಗ್ಲೇ ಹಾವೇರಿ ಹೆಸ್ಕಾಂಗೆ ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಉತ್ತರ ಕನ್ನಡ ಮಹಿಳಾ ಠಾಣೆಯ ಮೋತಿಲಾಲ್ ಪವಾರ್ ನೂತನ ಇನ್ಸ್ಪೆಕ್ಟರ್ ಆಗಿ ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಹಾವೇರಿ ಜಿಲ್ಲೆಯ ಕುಮಾರಪಟ್ಟಣಂ ವೃತ್ತಕ್ಕೆ ಭಾಗ್ಯವತಿಯವರ ಸ್ಥಾನಕ್ಕೆ ಸುನೀಲ್ ಕುಮಾರ್ ಹೆಚ್ ವರ್ಗಾವಣೆಯಾಗಿದ್ದಾರೆ.


 
                         
                       
                       
                       
                       
                      