ಅಕ್ರಮ ಮಟ್ಕಾ ( ಒಸಿ ) ಅಡ್ಡೆ ಮೇಲೆ ದಾಳಿ ನಾಲ್ವರ ಬಂಧನ

ದಾವಣಗೆರೆ: ಅಕ್ರಮ ಮಟ್ಕಾ ಅಡ್ಡೆಯ ಮೇಲೆ ದಾಳಿ ನಡೆಸಿರುವ ಮಲೆಬೆನ್ನೂರು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಕಲ್ಲಳ್ಳಿ ನಿಂಗರಾಜ (38), ಷರೀಫ್ ಸಾಬ್ (37), ಮುನಾಫ್ (45), ಮಾಲತೇಶ್(46) ಬಂಧತರಾಗಿದ್ದು, ಇವರಿಂದ 3,680 ರೂ.ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಸ್ಪಿ ಸಿ.ಬಿ.ರಿಷ್ಯಂತ್ ನೀಡಿದ್ದ ಸೂಚನೆಗಳ ಮೇರೆಗೆ ದಾವಣಗೆರೆ ಗ್ರಾಮಾಂತರ ಉಪ ವಿಭಾಗ ಡಿವೈಎಸ್ಪಿ ನರಸಿಂಹ ವಿ.ತಾಮ್ರದ್ವಜ ಮತ್ತು ಸಿಪಿಐ ಹರಿಹರ ಸತೀಶ್ ಕುಮಾರ್ ಯು ಅವರ ಮಾರ್ಗದರ್ಶನದಲ್ಲಿ ಮಲೆಬೆನ್ನೂರು ಠಾಣೆಯ ಪಿಎಸೈ ವೀರಬಸಪ್ಪ ಕುಸಲಾಪುರ ರವರ ನೇತೃತ್ವದ ತಂಡ ನಾಲ್ಕು ಕಡೆಗಳಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಯಾದ ಓ ಸಿ ಅಡ್ಡೆಯ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣಗಳು ದಾಖಲಾಗಿವೆ.