ಸಂಚಾರಿ ವಿಜಯ್ ಅವರು ಹೆಲ್ಮೆಟ್ ಧರಿಸಿದ್ದರೇ ಅವರ ಜೀವ ಉಳಿಯುತ್ತಿತ್ತು – ಡಾ. ಎಚ್. ಕೆ. ಎಸ್. ಸ್ವಾಮಿ.

ಚಿತ್ರದುರ್ಗ : ಸಂಚಾರಿ ವಿಜಯ್ ಅವರ ಸಾವು ಹೆಲ್ಮೆಟ್‍ನಿಂದ ತಡೆಯಬಹುದಾಗಿತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ. ಸಂಚಾರಿ ವಿಜಯ್ ಅವರು ಹೆಲ್ಮೆಟ್ ಧರಿಸಿದ್ದರೇ ಅವರ ಜೀವ ಉಳಿಯುತ್ತಿತ್ತ್ತು ಎಂಬ ಸತ್ಯ ನಮಗೆಲ್ಲರಿಗೂ ನೋವುಂಟು ಮಾಡಿದೇ. ಅವರು ಸಿನಿಮಾದಲ್ಲಿ ಹೆಲ್ಮೆಟ್ ಧರಿಸಿ ಗಾಡಿ ಚಲಾಯಿಸುವ ದೃಶ್ಯಗಳು ಇವೆ, ಆದರೇ ನಿಜ ಜೀವನದಲ್ಲಿ ಅವರು ಹೆಲ್ಮೆಟ್ ಮರೆತದ್ದು ದೊಡ್ಡ ಅಘಾತವನ್ನೇ ಮಾಡಿದೇ. ನಾವು ಅವರನ್ನ ನೆನಪಿನಟ್ಟುಕೊಂಡು, ಪ್ರತಿ ಬಾರಿ ಗಾಡಿ ಚಲಾಯಿಸುವಾಗಲೂ ಸಹ ಹೆಲ್ಮೆಟ್ ಧರಿಸುವುದನ್ನ ಮಾಡಿ, ಅವರ ತ್ಯಾಗ, ದಾನ ಧರ್ಮ, ಉತ್ತಮನಟನೆ ಎಲ್ಲವನ್ನ ಸಮಾಜದ ಏಳ್ಗೆಗಾಗಿ ಬಳಸಿಕೊಳ್ಳಬೇಕಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಬಹಳಷ್ಟು ಹೆಲ್ಮೆಟ್ ಜನಜಾಗೃತಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಬೇಕಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.

ಅವರು ನಗರದ ತರಳಬಾಳು ನಗರದ ಒಂದನೇ ಮುಖ್ಯರಸ್ತೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಮಲ್ಲನಕಟ್ಟೆ ಗ್ರಾಮ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ “ಹೆಲ್ಮೆಟ್‍ನಿಂದ ಪ್ರಾಣ ಉಳಿಸಿಕೊಳ್ಳಿ” ಬಗ್ಗೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಲನಚಿತ್ರ ನಟರುಗಳು, ವೈದ್ಯರು, ಸಾಹಿತಿಗಳು, ವಿಜ್ಞಾನಿಗಳು ಎಲ್ಲರೂ ಈ ಹೆಲ್ಮೆಟ್ ಜನಜಾಗೃತಿಯಲ್ಲಿ ಬಾಗವಹಿಸಿ, ಜನರ ಜೀವ ಉಳಿಸುವ ಮಾರ್ಗ ಕಂಡುಕೊಳ್ಳಬೇಕಾಗಿದೆ. ಪರಿಸರ ನಮಗಂತೂ ಬಾಳಿ ಬದುಕುವಂಥ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಅದು ನಮ್ಮ ಎಲ್ಲಾ ಅಮೂಲ್ಯ ಅಂಗಾಂಗಗಳನ್ನು ರಕ್ಷಿಸುವಂತೆ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ,

ವಿಜ್ಞಾನದಿಂದ ವಾಹನಗಳ ವೇಗ ಮಿತಿ ಮೀರುತ್ತಿದೆ, ನಮ್ಮ ದೇಹಕ್ಕೆ ಈಗ ಹೊರ ರಕ್ಷಕಗಳ ಅವಶ್ಯಕತೆ ಇದೆ, ಆದರೆ ಹೆಲ್ಮೆಟ್ ಇಲ್ಲದೆ ಗಾಡಿ ಚಲಾಯಿಸುವವರ ಸಂಖ್ಯೆ ಈಗಲೂ ಸಹ ಹೆಚ್ಚಿಗೆಯೇ ಇದೇ. ಅಮೂಲ್ಯವಾದ ಜೀವನ ಉಳಿಸಿಕೊಳ್ಳಲು ಈ ಸಾವನ್ನ ನೆನಪಿನಲ್ಲಿಟ್ಟುಕೊಳ್ಳಬೇಕು, ಅಂಗಾಂಗ ದಾನ ಮಾಡಿದ ದೃಶ್ಯ, ಅವರ ಕುಟುಂಬದವರ ನೋವು, ಎಲ್ಲರನ್ನ ಬದಲಾಯಿಸಬೇಕು. ಎಲ್ಲರೂ ಇನ್ನೂ ಮುಂದೆ ಹೆಲ್ಮೆಟ್ ಧರಿಸಿ, ಗಾಡಿ ಚಲಾಯಿಸುವ ಮನಸ್ಸು ಮಾಡಬೇಕು ಎಂದರು.

ಪ್ರತಿ ದಿನ ರಸ್ತೆ ಅಪಘಾತಗಳಾದಾಗ ನಾವು ಹೆಲ್ಮೆಟ್ ನೆನಪಿಸಿಕೊಳ್ಳುತ್ತೇವೆ. ನಂತರ ಮರೆಯುತ್ತಿದ್ದೇವೆ. ಸಣ್ಣ ತಪ್ಪಿನಿಂದಾಗಿ ಅಮೂಲ್ಯವಾದ ಜೀವಗಳನ್ನ ಕಳೆದುಕೊಳ್ಳುತ್ತಿದ್ದೇವೆ. ವೇಗವಾಗಿ ಗಾಡಿ ಚಲಾಯಿಸುವ ಸವಾರರು, ಪೊಲೀಸ್ ಭಯಕ್ಕೋಸ್ಕರ ಹೆಲ್ಮೆಟ್ ಧರಿಸುವುದು ತಪ್ಪು, ನಮ್ಮ ಕುಟುಂಬಕ್ಕಾಗಿ, ನಮ್ಮ ನಂಬಿದವರಿಗಾಗಿ, ಸಮಾಜದ ಸೇವೆಗಾಗಿ ಹೆಲ್ಮೆಟ್ ಧರಿಸಬೇಕು. ಮಕ್ಕಳಿದ್ದಾಗಲೇ ಇದರ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜನರಿಗೆ ಹೆಲ್ಮೆಟ್ ಧರಿಸಿ, ಸಾವು ತಪ್ಪಿಸಿ, ಜಾಗ್ರತರಾಗಿರಿ, ಎಚ್ಚರದಿಂದಿರಿ, ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು. ಹೆಲ್ಮೆಟ್ ತೊಟ್ಟ ವಿದ್ಯಾರ್ಥಿಗಳು ಜನರಲ್ಲಿ ಹಾಡಿನ ಮೂಲಕÀ ಜಾಗೃತಿ ಮೂಡಿಸಿದರು.ಕಾರ್ಯಕ್ರಮದಲ್ಲಿ ಪ್ರದೀಪ, ಎ.ನ್. ಅಸಿಸ್ಟೆಂಟ್ ಮ್ಯಾನೇಜರ್, ವಿಟ್ ಫೋರ್ಡ್, ವಿದ್ಯಾರ್ಥಿಗಳಾದ ಜಾನವಿ, ವೇನಿಲಾ, ಹೆಚ್.ಎಸ್.ರಚನ, ಹೆಚ್.ಎಸ್. ಪ್ರೇರಣ, ಸಂಧ್ಯಾ, ಅಂಶುಲ್, ಶಶಿ, ಅನಿಲ್ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!