ದಾವಣಗೆರೆ ವಿಮಾನ ನಿಲ್ದಾಣ 3 ವಾರದಲ್ಲಿ ವರದಿ

WhatsApp Image 2022-06-03 at 8.04.03 PM (1)

ದಾವಣಗೆರೆ : ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಶುಕ್ರವಾರ ದಾವಣಗೆರೆ ಜಿಲ್ಲೆಯ ಉದ್ದೇಶಿತ ವಿಮಾನ ನಿಲ್ದಾಣದ ಸ್ಥಳ ಪರಿಶೀಲನೆ ನಡೆಸಿದರು.

ಹಾಲುವರ್ತಿ,ಅನಗೋಡು ಮತ್ತು ಉಳುಪಿನ ಕಟ್ಟೆ ಗ್ರಾಮಗಳ ಸುತ್ತಲಿನ 359 ಎಕರೆ ಪ್ರದೇಶವನ್ನು ಸ್ಥಳ ಪರಿಶೀಲನೆ ನಡೆಸಿದರು.
ಸುಮಾರು 52 ಸರ್ವೆ ನಂಬರುಗಳ ಭಾಗಶಃ ಪ್ರದೇಶದಲ್ಲಿ ಮಣ್ಣಿನ ನಮೂನೆ,ಹೈ ಟೆನ್ ಶನ್ ವಿದ್ಯುತ್ ಮಾರ್ಗ ಹಾದುಹೋಗಿರುವುದು,ಭೂಮಿಯ ಸಮತಟ್ಟು ಮುಂತಾದವು ಗಳನ್ನು ವೀಕ್ಷಿಸಿದರು

ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳು ಮಾತನಾಡಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿದ್ದು ಸಾಧ್ಯಾಸಾಧ್ಯತೆಗಳ (feesibality) ವರದಿಯನ್ನು 3 ವಾರದೊಳಗಾಗಿ ನೀಡಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!