ಎಸ್ ಎಸ್ ಮಲ್ಲಿಕಾರ್ಜುನ ರಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ.!

ದಾವಣಗೆರೆ: ದಾವಣಗೆರೆ ಪಟ್ಟಣದ ಕಲ್ಲೇಶ್ವರ್ ಮಿಲ್ ಹಿಂಬಾಗದ ಫಾರ್ಮ್‌ ಹೌಸ್ ನಲ್ಲಿ ಪತ್ತೆಯಾದ ವನ್ಯ ಜೀವಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ ನ್ಯಾಯಾಲಯ ಜ.2 ಕ್ಕೆ ವಿಚಾರಣೆ ಮುಂದೂಡಿದೆ. ಈ ಸಂಬಂಧ ಸರಕಾರಿ ವಕೀಲರಿಗೆ ತಮ್ಮ ಆಕ್ಷೇಪಣೆ ಸಲ್ಲಿಸಲು ನೋಟಿಸ್ ಜಾರಿ ಮಾಡಿದೆ.

 

ವನ್ಯ ಜೀವಿ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎ4 ಮಿಲ್ ಮಾಲೀಕರ ವಿರುದ್ದ ಕೇಸ್ ದಾಖಲಾಗಿತ್ತು. ಆದರೆ ಆ ಮಿಲ್ ಯಾರದ್ದು ಎಂದು ಹೆಸರು ಉಲ್ಲೇಖವಿರಲಿಲ್ಲ. ಆದರೆ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಜಾಮೀನು ಕೋರಿ 2 ನೇ ಹೆಚ್ಚುವರಿ ಜಿಲ್ಲಾ ಸೆಷನ್ ನ್ಯಾಯಾಲಯದಲ್ಲಿ ದಾವಣಗೆರೆಯ ಹಿರಿಯ ವಕೀಲ ಪ್ರಕಾಶ್ ಪಾಟೀಲ್ ಮೂಲಕ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ಸರ್ಕಾರಿ ವಕೀಲರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು 2023 ರ ಜನವರಿ 02 ಕ್ಕೆ‌ ಮುಂದೂಡಿದೆ.

Leave a Reply

Your email address will not be published. Required fields are marked *

error: Content is protected !!