ವೀರಶೈವ ಮಹಾಸಭಾ ಅಧ್ಯಕ್ಷರ ಬಗ್ಗೆ ಮಾತನಾಡುವ ಮುನ್ನ ಎಚ್ಚರವಿರಲಿ : ಬಸವರಾಜು ವಿ ಶಿವಗಂಗಾ

ದಾವಣಗೆರೆ : ಬಸವತತ್ವವನ್ನ ನಿಮ್ಮಿಂದ ಹೇಳಿಸಿಕೊಳ್ಳುವಷ್ಟು ದಡ್ಡರಲ್ಲ ಎಂದು ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಗೆ ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕ ಗೌರವ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ತಿರುಗೇಟು ನೀಡಿದ್ದಾರೆ. ಹಿರಿಯರಾದ ಡಾ. ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ಮಾತನಾಡುವ ಮುನ್ನ ಎಚ್ಚರವಿರಲಿ ಎಂದರು. ಎಲಬು ಇಲ್ಲದ ನಾಲೆಗೆ ಎಂದು ಏನನ್ನು ಬೇಕಾದರೂ ಮಾತನಾಡುವುದು ಸರಿಯಲ್ಲ. ಅವರಿಗೆ ಅನುಭವವಾದಷ್ಟು ನಿಮಗೆ ಇನ್ನೂ ಸರಿಯಾಗಿ ವಯಸ್ಸು ಆಗಿಲ್ಲ. ಬಿಜೆಪಿ ಪಕ್ಷದ ನಾಯಕರ ಅಣತೆಯಂತೆ ಕುಣಿಯುವುದನ್ನ ಮೊದಲು ಬಿಡಬೇಕೆಂದು ಕಿವಿ ಮಾತನ್ನ ಹೇಳಿದರು. ಕೇಂದ್ರ, ರಾಜ್ಯದಲ್ಲೂ ಬಿಜೆಪಿ ಆಡಳಿತವಿದೆ ನಿಮ್ಮದೇ ಸರ್ಕಾರ ಅಧಿಕಾರಿಗಳು ಸಹ ನಿಮ್ಮ ಸರ್ಕಾರದವರೇ ಹೀಗಿದ್ದಾಗ ನಿಮ್ಮ ಸರ್ಕಾರದ ವಿರುದ್ಧವೇ ಬೀದಿಗಿಳಿದು ಪ್ರತಿಭಟನೆ ಮಾಡುತ್ತೀರಾ ಎಂದರೆ ನಿಮಗೆ ಯಾವ ನೈತಿಕತೆ ಇದೆ ನಾಚಿಕೆ ಆಗಬೇಕೆಂದರು. ಎಸ್ ಎಸ್ ಮಲ್ಲಿಕಾರ್ಜುನ್ ಅವರು ತಪ್ಪು ಮಾಡಿದ್ದರೆ ಅಧಿಕಾರಿಗಳೇ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರು, ಬಿಜೆಪಿ ಪಕ್ಷದವರು ರಾಜಕೀಯ ಲಾಭ ಪಡೆಯಲು ಈ ರೀತಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡುತ್ತಾ ಅಧಿಕಾರಿಗಳ ವಿರುದ್ಧ ಗೂಂಡಾ ವರ್ತನೆ ಮಾಡುತ್ತಾ ಒತ್ತಡ ಹೇರಲು ಪ್ರಯತ್ನ ಮಾಡುತ್ತಿದ್ದೀರಾ. ಕಾನೂನಿಗಿಂತ ಯಾರು ದೊಡ್ಡವರಲ್ಲಾ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ನೀವು ಕಾನೂನು ಮೂಲಕ ಹೋರಾಟ ಮಾಡಿ ಅದನ್ನ ಬಿಟ್ಟು ನಿಮ್ಮ ಸರ್ಕಾರ, ಅಧಿಕಾರಿಗಳ ವಿರುದ್ಧವೇ ಪ್ರತಿಭಟನೆ ಮಾಡುತ್ತೀರಾ ಎಂದರೆ ನಿಮಗೆ ಯಾವ ನೈತಿಕತೆ ಇದೆ ಎಂದು ಬಸವರಾಜು ವಿ ಶಿವಗಂಗಾ ಪ್ರಶ್ನೆ ಮಾಡಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ನೇತೃತ್ವದಲ್ಲಿ ತಮ್ಮದೇ ಸರ್ಕಾರ ವಿರುದ್ಧ ಪ್ರತಿಭಟನೆ ಮಾಡುತ್ತೀರಾ ಎಂದರೆ ನಿಮ್ಮ ಸರ್ಕಾರದ ಆಡಳಿತ ವೈಫಲ್ಯ ಎಂಬುದನ್ನ ನೀವೇ ತೋರಿಸಿಕೊಟ್ಟಿದ್ದೀರಾ. ಮುಂಬರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂಬ ಕಾರಣಕ್ಕೆ ಹತಾಶಗೊಂಡಿದ್ದು ರಾಜಕೀಯ ಲಾಭ ಪಡೆಯಲು ಇಂಥ ಹೀನಾಯ ರೀತಿ ಪ್ರತಿಭಟನೆಗೆ ಮುಂದಾಗಿರುವುದು ನಿಮ್ಮ ಬಿಜೆಪಿ ಪಕ್ಷ ಮತ್ತು ನಾಯಕರಿಗೆ ನಾಚಿಕೆಯಾಗಬೇಕು. 95 ವರ್ಷದ ಹಿರಿಯ ಮುತ್ಸದ್ಧಿ ರಾಜಕಾರಣಿಯಾದ ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ನಿಮ್ಮಿಂದ ಸಂಸ್ಕೃತಿ ಪಾಠ ಕಲಿಯುವ ಅಗತ್ಯವೂ ಇಲ್ಲ ಅವಶ್ಯಕತೆಯೂ ಇಲ್ಲ. ನಿಮ್ಮ ಹೋರಾಟ ನ್ಯಾಯಯುತವಾಗಿದ್ದರೆ ಕಾನೂನು ಮೂಲಕ ಮಾಡಿ. ಈ ರೀತಿ ಬೀದಿಯಲ್ಲಿ ತಮ್ಮದೇ ಸರ್ಕಾರದ ಕಚೇರಿಗೆ ನುಗ್ಗಿ ಗಲಾಟೆ ಮಾಡುವುದು ಮತ್ತೊಬ್ಬರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ ಇದು ನಿಮ್ಮ ಸಂಸ್ಕೃತಿ ಯನ್ನ ಎತ್ತಿ ತೋರಿಸುತ್ತದೆಂದರು. ನಿಮ್ಮ ನಾಯಕರ ಕುಟುಂಬದವರು ಮಾಡಿರುವ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ, ಹಾಗೂ ಅದಿರು ಸಂಗ್ರಹ, ಬೆಂಗಳೂರಿನಲ್ಲಿರುವ ಆಸ್ಪತ್ರೆಯಲ್ಲಿ ನಡೆದ ಗಲಾಟೆ ಬಗ್ಗೆ ವಿವರಣೆ ಕೊಡಿ. ವಿದ್ಯಾಸಂಸ್ಥೆಗೆ ಟ್ರಸ್ಟ್ ಹೆಸರಲ್ಲಿ ಸರ್ಕಾರದಿಂದ ಕಡಿಮೆ ಬೆಲೆಗೆ ಕೋಟ್ಯಂತರ ರೂಪಾಯಿ ಬೆಲೆ ಬಾಳು ಜಾಗವನ್ನ ತೆಗೆದುಕೊಂಡು ವಿದ್ಯಾಸಂಸ್ಥೆ ನಡೆಸುವ ಜಾಗದಲ್ಲಿ ವೈಯುಕ್ತಿ ಕೆಲಸಕ್ಕೆ ಗೆಸ್ಟ್ ಹೌಸ್ ನಿರ್ಮಿಸಿಕೊಂಡು ಬಿಜೆಪಿ ನಾಯಕರ ರಾಜಕೀಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದೀರಾ ಇದು ನ್ಯಾಯವೇ ಈ ಬಗ್ಗೆ ಮಾಹಿತಿ ನೀಡಿ ಎಂದು ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕ ಗೌರವ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದರು.

 
                         
                       
                       
                       
                       
                       
                       
                      