ನೀರಾವರಿ ನಿಗಮದ ಕೇಂದ್ರ ಕಚೇರಿ ರಾಜಧಾನಿಯಿಂದ ದೇವನಗರಿಗೆ
ಬೆಂಗಳೂರು: ರಾಜ್ಯದ ಕೇಂದ್ರ ಸ್ಥಾನವಾದ ದಾವಣಗೆರೆಗೆ ಕರ್ನಾಟಕ ನೀರಾವರಿ ನಿಗಮದ ಕೇಂದ್ರ ಕಚೇರಿಯನ್ನು ಸ್ಥಳಾಂತರಿಸಲು ಸರ್ಕಾರ ಆದೇಶ ಹೊರಡಿಸಿದೆ.
ನಿಗಮದಡಿ ತುಂಗ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳು, ತುಂಗಭದ್ರಾ ಅಣೆಕಟ್ಟು, ಕಳಸಾಬಂಡೂರಿ ಯೋಜನೆ ಘಟಪ್ರಭಾ, ಮಲಪ್ರಭಾ ಹಾಗೂ ಕಾರಂಜ ಯೋಜನೆಗಳು ಅಲ್ಲದೆ ಇತರೆ ಏತ ನೀರಾವರಿ ಯೋಜನೆಗಳು ಇದರ ವ್ಯಾಪ್ತಿಯಲ್ಲಿ ಬರಲಿದೆ.
ರಾಜ್ಯ ಸರ್ಕಾರ ಒಂಭತ್ತು ಪ್ರಮುಖ ಸರ್ಕಾರಿ ಕಚೇರಿ ಮತ್ತು ನಿಗಮಗಳನ್ನು ಕೇಂದ್ರ ಸ್ಥಾನದಿಂದ ಮಧ್ಯೆ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಸ್ಥಳಾಂತರಿಸಲು ತೀರ್ಮಾನಿಸಿದೆ.
ಇದರ ಮೊದಲ ಭಾಗವಾಗಿ ಕರ್ನಾಟಕ ನೀರಾವರಿ ನಿಗಮಗಳನ್ನು ದಾವಣಗೆರೆಗೆ ಸ್ಥಳಾಂತರಿಸುವುದ ರಿಂದ ಯೋಜನೆಗಳು ಮತ್ತಷ್ಟು ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಅಂದಾಜಿಸಿದೆ.