ಎಸ್.ಎಸ್ ಅಕ್ರಮಗಳ ಪಿತಾಮಹರೋ ಅಥವಾ ಜಿಲ್ಲೆಯಲ್ಲಿ ಅಭಿವೃದ್ಧಿ, ಶಾಂತಿ, ನೆಮ್ಮದಿಯ ಪಿತಾಮಹರೋ ಜನರೇ ತೀರ್ಮಾನಿಸಲಿ – ಕೆ.ಎಲ್.ಹರೀಶ್ ಬಸಾಪುರ.

ಎಸ್.ಎಸ್ ಅಕ್ರಮಗಳ ಪಿತಾಮಹರೋ ಅಥವಾ ಜಿಲ್ಲೆಯಲ್ಲಿ ಅಭಿವೃದ್ಧಿ, ಶಾಂತಿ, ನೆಮ್ಮದಿಯ ಪಿತಾಮಹರೋ ಜನರೇ ತೀರ್ಮಾನಿಸಲಿ – ಕೆ.ಎಲ್.ಹರೀಶ್ ಬಸಾಪುರ.

ದಾವಣಗೆರೆ :ರಾಜ್ಯದಲ್ಲೆಲ್ಲಾ ಕೋಮುಗಲಭೆ ಘಟನೆಗಳ, ಕ್ಷೇತ್ರಗಳಲ್ಲಿ ಅಭಿವೃದ್ಧಿ ವಂಚಿತ, ಶಿಕ್ಷಣ, ಉದ್ಯೋಗ, ಆರ್ಥಿಕ ಕ್ಷೇತ್ರಗಳಲ್ಲಿ ಹಿನ್ನಡೆ ಇರುವಂತಹ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಶಾಂತಿ, ನೆಮ್ಮದಿಯಿಂದ ಸಹಬಾಳ್ವೆ ನಡೆಸುವಂತಹ ಸ್ಥಿತಿ ನಿರ್ಮಾಣ, ಶಿಕ್ಷಣ ಸಂಸ್ಥೆಗಳನ್ನು, ಆಸ್ಪತ್ರೆಗಳನ್ನು ನಿರ್ಮಿಸುವ ಮೂಲಕ ಉದ್ಯೋಗ, ಆರೋಗ್ಯ ಕಲ್ಪಿಸಿ ರಾಜ್ಯದಲ್ಲಿಯೇ ಎಲ್ಲರೂ ದಾವಣಗೆರೆ ಕಡೆ ನೋಡುವಂತೆ ಸ್ಥಿತಿ ನಿರ್ಮಾಣ ಮಾಡಿದಂತಹ ಹಿರಿಯ ರಾಜಕಾರಣಿ, ಜಾತಿ ಧರ್ಮಗಳ ಭೇದವಿಲ್ಲದೆ ಸರ್ವರನ್ನು ಸಮನಾಗಿ ಕಾಣುವ ಡಾ. ಶಾಮನೂರು ಶಿವಶಂಕರಪ್ಪನವರನ್ನು ಅಕ್ರಮಗಳ ಪಿತಾಮಹ ಎಂದು ಹೇಳಿಕೆ ನೀಡಿರುವ ಮಾಜಿ ನಗರಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಯಶವಂತರಾವ್ ಜಾದವ್ ಇಡೀ ಕ್ಷೇತ್ರದ ಜನತೆಗೆ ಮಾಡಿದ ಅವಮಾನವಾಗಿದೆ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಕೆ.ಎಲ್. ಹರೀಶ್ ಬಸಾಪುರ ತಿಳಿಸಿದ್ದಾರೆ.

ಭವಿಷ್ಯ ಅವರ ಹೇಳಿಕೆ ಬಾಲಿಶವಾಗಿದ್ದು, ಡಾ. ಶಾಮನೂರು ಶಿವಶಂಕರಪ್ಪನವರು ದಾವಣಗೆರೆ ನಗರದಲ್ಲಿ ಶಾಂತಿ ನೆಮ್ಮದಿಯ ಹಾಗೂ ಅಭಿವೃದ್ಧಿಯ ಪಿತಾಮಹ ಎಂಬುದನ್ನು ಈ ಮೂಲಕ ಅವರಿಗೆ ನೆನಪಿಸುವ ಕಾರ್ಯ ಮಾಡುತ್ತಿದ್ದೇವೆ.

ಒಬ್ಬ ಹಿರಿಯ ರಾಜಕಾರಣಿಯಾದ ಡಾ. ಶಾಮನೂರು ಶಿವಶಂಕರಪ್ಪನವರ ಬಗ್ಗೆ ತಾವುಗಳು ನೀಡಿರುವ ಹೇಳಿಕೆಗೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರೇ ಉತ್ತರಿಸಲಿದ್ದಾರೆ, ಇದು ಒಬ್ಬ ಬಡವ – ಶ್ರೀಮಂತ ಮತ್ತು ಜಾತಿಭೇದವಿಲ್ಲದ ರಾಜಕಾರಣಿ, ಜಿಲ್ಲೆಯ ಅಭಿವೃದ್ಧಿಯ ಚಿಂತಕ, ಸರ್ವ ಧರ್ಮಗಳ ಶಾಂತಿಯ ಬಯಸುವ ನಾಯಕನಿಗೆ ತಾವು ಮಾಡಿದ ಅಗೌರವವಾಗಿದ್ದು, ಇದಕ್ಕೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರೇ ಉತ್ತರಿಸಲಿದ್ದಾರೆ.

ಇನ್ನು ಎಸ್.ಎಸ್ ಮಲ್ಲಿಕಾರ್ಜುನ್ ತಪ್ಪು ಮಾಡದಿದ್ದರೆ ನಿರೀಕ್ಷಣಾ ಜಾಮೀನು ಏಕೆ ಪಡೆದಿದ್ದಾರೆ ಎಂಬ ಅವರ ಹೇಳಿಕೆ ಕಾನೂನನ್ನೇ ಅವಮಾನಿಸುವಂತಿದ್ದು, ನಿರೀಕ್ಷಣಾ ಜಾಮೀನು ಕೇವಲ ತಪ್ಪು ಮಾಡಿದವರು ಪಡೆಯುವಂತಹದಲ್ಲ, ತಮ್ಮ ತಪ್ಪು ಇರದಿದ್ದರೂ ಸಹ ಅನಾವಶ್ಯಕವಾಗಿ ಅವರ ಹೆಸರನ್ನು ಸೇರಿಸಿ, ಅವರಿಗೆ ತೊಂದರೆ ನೀಡುತ್ತಿದ್ದಂತಹ ಸಂದರ್ಭದಲ್ಲಿ ಸಹಾಯ ಪಡೆಯುವ ಕಾನೂನಿನ ಒಂದು ಭಾಗ ಎಂಬ ಜ್ಞಾನ ಯಶವಂತರಾವ್ ರವರಿಗೆ ಇದೆ ಎಂದು ತಿಳಿದಿದ್ದೆವು.

ಎಸ್.ಎಸ್. ಮಲ್ಲಿಕಾರ್ಜುನ್ ರವರು ದಾವಣಗೆರೆ ನಗರದಲ್ಲಿ ಹಾಗೂ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಎಲ್ಲರ ಕಣ್ಣಿಗೆ ಕಾಣುತ್ತಿದ್ದು, ತಮ್ಮ ಆಪಾದನೆಗಳು ಕೇವಲ ವಿರೋಧ ಪಕ್ಷದ ನಾಯಕರನ್ನು ಟೀಕಿಸುವ ಹಾಗೂ ವೈಯಕ್ತಿಕವಾಗಿ ನಿಂದಿಸುವ ರಾಜಕಾರಣದ ಹೇಳಿಕೆಗಳಾಗಿವೆ ಎಂದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!