ನೇರ ಪಾವತಿ ಪೌರಕಾರ್ಮಿಕರನ್ನ ಏಕಕಾಲದಲ್ಲಿ ಕಾಯಂ ಗೊಳಿಸಬೇಕೆಂದು ಆಗ್ರಹ
ದಾವಣಗೆರೆ: ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನಗರಸಭೆ ಕಾರ್ಯನಿರ್ವಹಿಸುತ್ತಿರುವ ನೇರ ಪಾವತಿ ಪೌರಕಾರ್ಮಿಕರನ್ನ ಏಕಕಾಲದಲ್ಲಿ ಕಾಯಂಗೊಳಿಸಬೇಕು ಹಾಗೂ ಇನ್ನೂ ಇತರೆ ಗುತ್ತಿಗೆ ಪದ್ಧತಿಯಲ್ಲಿ ಕಾರ್ಯನಿರ್ಸುತ್ತಿರುವ ಕಾರ್ಮಿಕರನ್ನು ಸಹ ಖಾಯಂ ಗೊಳಿಸಬೇಕು ಅಥವಾ ನೇರ ಪಾವತಿ ಮುಖಾಂತರವಾಗಿ ನೇಮಕ ಮಾಡಿಕೊಳ್ಳುವ ವಿಚಾರವಾಗಿ ಹಾಗೂ ಸರ್ಕಾರ ಆದೇಶಿಸಿರುವ ನೇರ ಪಾವತಿ ಪೌರಕಾರ್ಮಿಕರ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲವು ಗೊಂದಲಗಳಿದ್ದು ಸರ್ಕಾರದ ಜೊತೆ ಚರ್ಚಿಸಲಾಗುವುದು ಎಂದು ಬೆಂಗಳೂರು ನಗರದಲ್ಲಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನಗರ ಸಭೆ ಪುರಸಭೆ ಪೌರಕಾರ್ಮಿಕರ ಮಹಾ ಸಂಘದ ಕಚೇರಿಯಲ್ಲಿ ರಾಜ್ಯಾಧ್ಯಕ್ಷರಾದ ನಾರಾಯಣ ಮೈಸೂರ್ ರವರ ಅಧ್ಯಕ್ಷತೆಯಲ್ಲಿ ಸಭೆಯನ್ನ ನಡೆಸಲಾಯಿತು.
ರಾಜ್ಯ ಕಾರ್ಯಾಧ್ಯಕ್ಷರಾದ ಎಲ್ ಎಮ್ ಹನುಮಂತಪ್ಪನವರು ಸಹ ಭಾಗವಹಿಸಿ ಪೌರಕಾರ್ಮಿಕರನ್ನ ಖಾಯಂಗೊಳಿಸುವ ವಿಚಾರದಲ್ಲಿ ಸರ್ಕಾರ ಸರಿಯಾದ ನಿರ್ಧಾರಗಳನ್ನು ಕೈಗೊಳ್ಳುತ್ತಿಲ್ಲ ವೆಂದು ಹಾಗೂ ಗುತ್ತಿಗೆ ಪದ್ಧತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಪದ್ಧತಿಯಲ್ಲಿರುವ ವಾಹನ ಚಾಲಕರು ಒಳಚರಂಡಿ ಸಹಾಯಕರು ನೀರು ಸರಬರಾಜು ಕಾರ್ಮಿಕರು ಸಹ ನೇರ ಪಾವತಿಯಲ್ಲಿ ನೇಮಿಸಿಕೊಳ್ಳುವ ವಿಚಾರ ನಮ್ಮ ಸಂಘದ ಬಹು ಬೇಡಿಕೆಗಳಾಗಿವೆ ಎಂದು ಎಂದು ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ತಿಳಿಸಿದರು.