ಅಡ್ಡ ಬಂದ ಬೈಕ್ ಸವಾರ, ಕೈ ನಾಯಕಿ ಸವಿತಾಬಾಯಿ ಕಾರು ಅಪಘಾತ

Cyclist who came across, Kai heroine Savitabai's car accident

ದಾವಣಗೆರೆ : ನಗರದ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ನಡೆಯಲಿರುವ ಪ್ರಜಾಧ್ವನಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನವಿಲೇಹಾಳ್ ಗ್ರಾಮದಲ್ಲಿ ಸಾರ್ವಜನಿಕರನ್ನು ಆಹ್ವಾನ ಮಾಡುವುದಕ್ಕೆ ಹೋಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ‌ಕಾಂಗ್ರೆಸ್ ನ ನಾಯಕಿ, ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸವಿತಾಬಾಯಿ ಚಲಿಸುತ್ತಿದ್ದ
ಕಾರು ಅಪಘಾತವಾಗಿದೆ‌. ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ….ಸವಿತಾ ಬಾಯಿ ಕಾರ್ಯಕ್ರಮದ ಸಿದ್ಧತೆಯಲ್ಲಿದ್ದಾಗ ದಾವಣಗೆರೆ ಹೈವೇಯಲ್ಲಿ ಸಂಚರಿಸುತ್ತಿರುವಾಗ, ಬೈಕ್ ಅಡ್ಡ ಬಂದಿದೆ. ಈತನ ಪ್ರಾಣ ಉಳಿಸಲು ಹೋಗಿ ಎದುರಿಗೆ ನಿಂತಿದ್ದ ಕಾರಿಗೆ ಗುದ್ದಿದ್ದಾರೆ. ಒಟ್ಟಾರೆ ಸವಿತಾಬಾಯಿ ಅಪಾಯದಿಂದ ಪಾರಾಗಿದ್ದಾರೆ…ದ್ವಿಚಕ್ರ ವಾಹನ ಸವಾರರೊಬ್ಬರ ಅಜಾಗರೂಕತೆಯಿಂದ ನನ್ನ ವಾಹನಕ್ಕೆ ಅಡ್ಡ ಬಂದಿದ್ದಾರೆ. ಅಪಘಾತ ಸಂಭವಿಸಿದೆ. ಅದೃಷ್ಟವಶಾತ್‌ ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ಧೇವೆ. ನನ್ನ ಕ್ಷೇತ್ರದ ಜನರ ಆಶೀರ್ವಾದವೇ ನಮ್ಮನ್ನು ಪಾರು ಮಾಡಿದೆ ಎಂದು ಸವಿತಾಬಾಯಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!