ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಲೋಕಾ ಬಲೆಗೆ.! 1.87 ಲಕ್ಷ ಸ್ವೀಕರಿಸುವಾಗ ದಾಳಿ
ದಾವಣಗೆರೆ: ಪೋಕ್ಸೋ ಪ್ರಕರಣದ ಆರೋಪಿಗೆ ಸಹಕರಿಸುವ ಸಲುವಾಗಿ ಚೆಕ್ ರೂಪದಲ್ಲಿ 1.87 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕಿ ಯೊಬ್ಬರು ಭಾನುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕಿ ರೇಖಾ ಎಸ್.ಕೋಟೆಗೌಡರ್ ಚೆಕ್ ಆದಾರ ಇಟ್ಕೊಂಡಿದ್ದು ಇವತ್ತು 1.87 ಲಕ್ಷ ಹಣ ಪಡೆದು, ಚೆಕ್ ವಾಪಾಸ್ ಕೊಡುವಾಗ ಎರಡರ ಸಮೇತ ಸಿಕ್ಕಿ ಬಿದ್ದಿದ್ದಾರೆ.
ರೂಪದಲ್ಲಿ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ತಾಲೂಕಿನ ಕಿತ್ತೂರು ಗ್ರಾಮದ ಜಿ.ಟಿ. ಮದನಕುಮಾರ್ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ಅಪರಾಧದ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಆರೋಪಿಗೆ ಸಹಾಯ ಮಾಡಲು ರೇಖಾ 3 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ ಈಗಾಗಲೇ 1.17 ಲಕ್ಷ ರೂ. ಹಣವನ್ನು ಪಡೆದಿದ್ದರು. ಉಳಿದ 1.87 ಲಕ್ಷ ರೂ. ಹಣದ ಚೆಕ್ನ್ನು ತಮ್ಮ ದಾವಣಗೆರೆ ನಿವಾಸದಲ್ಲಿ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ರೇಖಾ ಅವರನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೇಕ್ಟರ್ಗಳಾದ ಎನ್.ಎಚ್. ಆಂಜನೇಯ, ಎಚ್.ಎಸ್. ರಾಷ್ಟ್ರಪತಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಸ್.ಎಂ. ವೀರೇಶಯ್ಯಘಿ, ಎನ್.ಆರ್. ಚಂದ್ರಶೇಖರ್, ವಿ.ಎಚ್. ಆಂಜನೇಯ, ಮುಜೀಬ್ ಖಾನ್, ಡಿ.ಬಸವರಾಜ, ಸಿ.ಎಸ್. ಬಸವರಾಜ, ಪಿ. ಮೋಹನಕುಮಾರ, ಕೋಟಿ ನಾಯ್ಕ, ಆಶಾ, ಜಂಷಿದಾಖಾನಂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.