ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿ 345 ಕೋಟಿ ರೂ. ಅನುದಾನಕ್ಕೆ ಮನವಿ ಮಾಡಿದ ರೇಣುಕಾಚಾರ್ಯ
ಹೊನ್ನಾಳಿ : ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ, ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಸೇತುವೆ ಮತ್ತು ರಸ್ತೆ ಕಾಮಗಾರಿಗಳಿಗೆ 345 ಕೋಟಿ ರೂಪಾಯಿ ಅನುದಾನಕ್ಕೆ ನೀಡುವಂತೆ ಮನವಿ ಮಾಡಿದ್ದು ಶೀಘ್ರದಲ್ಲೇ ಹಣ ಬಿಡುಗಡೆ ಮಾಡಿವ ಭರವಸೆ ನೀಡಿದ್ದಾರೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದರು, ಈಗಾಗಲೇ ನಿತಿನ್ ಗಡ್ಕರಿಯವನ್ನು ಮೂರ್ನಾಲ್ಕು ಬಾರೀ ಭೇಟಿ ಮಾಡಿ ಮನವಿ ಮಾಡಿದ್ದು, ಇಂದು ಮತ್ತೋಮ್ಮೆ ದೆಹಲಿಯಲ್ಲಿ ಭೇಟಿ ಮಾಡಿ ಅವಳಿ ತಾಲೂಕಿನ ಸೇತುವೆ, ಹಾಗೂ ರಾಜ್ಯ ಹೆದ್ದಾರಿಗಳಿಗೆ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆಂದರು.
ನನ್ನ ಮನವಿಗೆ ಸ್ಪಂಧಿಸಿದಿ ಸಚಿವರಾದ ನಿತಿನ್ ಗಡ್ಕರ್ ಅವರು, ಅನುದಾನ ಮಂಜುರಾತಿ ಹಂತದಲ್ಲಿದ್ದು ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆಂದರು.
ಆ ಭಾಗದ ಬಹುದಿನದ ಕನಸಾಗಿದ್ದ ಗೋವಿನಕೋವಿಯಿಂದ ರಾಂಪುರ ಸಂಪರ್ಕಿಸುವ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ 60 ಕೋಟಿ ರೂ, ನಲ್ಲೂರಿನಿಂದ ಸವಳಂಗದ ವರೆಗೆ ರಸ್ತೆ ಅಭಿವೃದ್ದಿ ( ಸಾಸ್ವೇಹಳ್ಳಿ-ರಾಂಪುರ-ಗೋವಿನಕೋವಿ ಮೂಲಕ) 65 ಕೋಟಿ, ಹರಿಹರ-ಹೊನ್ನಾಳಿ ಮುಖ್ಯ ರಸ್ತೆ ಅಭಿವೃದ್ದಿಗೆ 95 ಕೋಟಿ, ಹುಣಸೇಹಳ್ಳಿ,ಬೆನಕನಹಳ್ಳಿ,ಸಾಸ್ವೇಹಳ್ಳಿ,ಲಿಂಗಾಪುರ, ಆನವೇರಿ ವರೆಗೆ ಹಾಗೂ ಗೊಲ್ಲರಹಳ್ಳಿ, ಹುಣಸೆಹಳ್ಳಿ,ಬಸವಪಟ್ಟಣ, ಸಾಗರ್‍ಪೇಟೆವರೆಗೆ ವೃತ್ತದವರೆಗೆ ರಸ್ತೆ ಅಭಿವೃದ್ದಿ 125 ಕೋಟಿ ಸೇರಿ ಒಟ್ಟು 345 ಕೋಟಿ ರೂಪಾಯಿ ಅನುದಾನಕ್ಕೆ ಕೇಂದ್ರ ಸಚಿವರ ಬಳಿ ಮನವಿ ಸಲ್ಲಿಸಲಾಗಿದೆ ಎಂದರು.
ದೆಹಲಿಯಲ್ಲಿ ನಿತಿನ್ ಗಡ್ಕರಿ ಅವರು ನನ್ನನ್ನು ಆತ್ಮೀಯವಾಗಿ ಕಂಡರಲ್ಲದೇ,ಮುಂಬರುವ ವಿಧಾನಸಭಾ ಚುನಾವಣೆಯ ಬಗ್ಗೆ ಹಾಗೂ ರಾಜ್ಯ ರಾಜಕೀಯದ ಹಲವಾರು ವಿದ್ಯಮಾನಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿ, ಅನೇಕ ವಿಷಯಗಳ ಬಗ್ಗೆ ಸಲಹೆ ನೀಡಿದರೆಂದರು.