ದಾವಣಗೆರೆ

DJ: ಗಣೇಶೋತ್ಸವ ಮೆರವಣಿಗೆಯಲ್ಲಿ ಡಿ.ಜೆ ಸಿಸ್ಟಂ ಬಳಕೆಗೆ ಕಟ್ಟುನಿಟ್ಟಿನ ನಿಯಮ: ಜಿಲ್ಲಾಧಿಕಾರಿ ಆದೇಶ

Share
Share

ದಾವಣಗೆರೆ: (DJ) ದಾವಣಗೆರೆ ಜಿಲ್ಲೆಯಾದ್ಯಂತ ದಿನಾಂಕ 14-09-2026 ರಿಂದ ಆರಂಭವಾಗುವ ಗಣೇಶ ಹಬ್ಬದ ಆಚರಣೆ ಹಾಗೂ ಮೂರ್ತಿ ವಿಸರ್ಜನಾ ಮೆರವಣಿಗೆಗಳ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಮತ್ತು ಸೌಹಾರ್ದತೆ ಕಾಪಾಡುವ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ (ಐಎಎಸ್) ಅವರು ಡಿ.ಜೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಷರತ್ತುಗಳನ್ನೊಳಗೊಂಡ ಆದೇಶ ಹೊರಡಿಸಿದ್ದಾರೆ.

ಮುಖ್ಯ ಮುಖ್ಯಾಂಶಗಳು ಹಾಗೂ ಷರತ್ತುಗಳು:
ಶಬ್ದ ಮಾಲಿನ್ಯ ನಿಯಂತ್ರಣ:Noise Pollution (Regulation & Control) Rule-2000 ನಿಯಮಾವಳಿಗಳ ಮಾನದಂಡಗಳನ್ವಯ ಶಬ್ದ ಬಳಕೆಯನ್ನು ಪೊಲೀಸ್ ಇಲಾಖೆಯವರು ಪರಿಶೀಲಿಸಿದ ನಂತರವೇ ಅನುಮತಿ ನೀಡಲಾಗುತ್ತದೆ.

ಹೊರ ಜಿಲ್ಲೆಯ ಡಿ.ಜೆಗಳಿಗೆ ನಿಷೇಧ: ಗಣೇಶ ಹಬ್ಬದ ಸಂದರ್ಭದಲ್ಲಿ ಇತರೆ ಜಿಲ್ಲೆಗಳಿಂದ ಡಿ.ಜೆ ಸಿಸ್ಟಂಗಳನ್ನು ತಂದು ದಾವಣಗೆರೆ ಜಿಲ್ಲೆಯಲ್ಲಿ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಸೌಂಡ್ ಸಿಸ್ಟಂ ನಿಯಮ: ವೂಫರ್ಸ್ (Woofers) ಮತ್ತು ಸಬ್ ವೂಫರ್ಸ್ (Sub-woofers) ಬಳಸಲು ಅವಕಾಶವಿರುತ್ತದೆ.
ಹೆಚ್ಚಿನ ಶಬ್ದ ಹೊರಸೂಸುವ ಸಾಧನಗಳಿಗೆ ತಡೆ: ಡಿ.ಜೆಗಳಲ್ಲಿ ಬಳಸಲಾಗುವ ಅತ್ಯಂತ ಹೆಚ್ಚಿನ ಶಬ್ದ ಹೊರಸೂಸುವ ‘ಪ್ರೆಶರ್ ಮೆಜರ್ಮೆಂಟ್’ (Pressure Measurement) ಹಾಗೂ ಇತರ ವಿಶೇಷ ಉಪಕರಣಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಉಲ್ಲಂಘಿಸಿದರೆ ಕಾನೂನು ಕ್ರಮ:ನೀಡಲಾದ ಮಾನದಂಡಗಳನ್ನು ಮತ್ತು ಷರತ್ತುಗಳನ್ನು ಡಿ.ಜೆ ಬಳಕೆದಾರರು ಅಥವಾ ಆಯೋಜಕರು ಪಾಲಿಸದಿದ್ದಲ್ಲಿ, ಅವರ ವಿರುದ್ಧ ಅನುಮತಿ ಪ್ರಾಧಿಕಾರವಾದ ಪೊಲೀಸ್ ಇಲಾಖೆಯು ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಜರುಗಿಸಲಿದೆ.

ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ರೋಗಿಗಳು ಹಾಗೂ ನವಜಾತ ಶಿಶುಗಳಿಗೆ ಶಬ್ದ ಮಾಲಿನ್ಯದಿಂದ ತೊಂದರೆಯಾಗದಂತೆ ತಡೆಯಲು ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ದಾವಣಗೆರೆರಾಜಕೀಯರಾಜ್ಯ / ಕರ್ನಾಟಕ

BSY: ಚಿತ್ರದುರ್ಗದಲ್ಲಿ ನಾಳೆ ‘ಬಿಎಸ್ ವೈ ಅಭಿಮಾನೋತ್ಸವ’ದ ಅಬ್ಬರ: ಅಮಿತ್ ಶಾ ಭಾಗಿ, ದಾವಣಗೆರೆಯಿಂದ ಹೊರಟ ಯಡಿಯೂರಪ್ಪ ಕುಟುಂಬ!

ದಾವಣಗೆರೆ/ಚಿತ್ರದುರ್ಗ: (BSY) ಕರ್ನಾಟಕ ರಾಜಕಾರಣದ ಧ್ರುವತಾರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಾರ್ವಜನಿಕ ಜೀವನದ 50 ವರ್ಷಗಳ ಸುವರ್ಣ ಸಂಭ್ರಮದ "ಅಭಿಮಾನೋತ್ಸವ"ಕ್ಕೆ ಕೋಟೆ ನಾಡು ಚಿತ್ರದುರ್ಗ ಸಜ್ಜಾಗಿದೆ. ಮೇ 9ರ...

ಅಪರಾಧದಾವಣಗೆರೆ

Lokayukta: ದಾವಣಗೆರೆ ಪಾಲಿಕೆ ವಲಯ-1ರ ಮೇಲೆ ಲೋಕಾಯುಕ್ತ ದಾಳಿ: ಫೋನ್-ಪೇ ಮೂಲಕ ಲಂಚದ ಆರೋಪ, ದಾಖಲೆಗಳ ಪರಿಶೀಲನೆ

ದಾವಣಗೆರೆ: (Lokayukta) ಮಹಾನಗರ ಪಾಲಿಕೆ ವಲಯ-1ರ ಕಚೇರಿಯಲ್ಲಿ ನಡೆಯುತ್ತಿದ್ದ ಎನ್ನಲಾದ ಸಾಲು ಸಾಲು ಅಕ್ರಮಗಳ ಕುರಿತು ಬಂದ ದೂರುಗಳ ಹಿನ್ನೆಲೆಯಲ್ಲಿ, ಇಂದು ಮುಂಜಾನೆಯಿಂದಲೇ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ತಪಾಸಣೆ...

Related Articles
ದಾವಣಗೆರೆರಾಜ್ಯ / ಕರ್ನಾಟಕ

Lokayukta SP: ದಾವಣಗೆರೆ ನೂತನ ಲೋಕಾಯುಕ್ತ ಎಸ್‌ಪಿಯಾಗಿ ಆ್ಯಂಟನಿ ಜಾನ್ ಅಧಿಕಾರ ಸ್ವೀಕಾರ: ದೂರು ಸಲ್ಲಿಕೆಗೆ ಕರೆ

ದಾವಣಗೆರೆ: (Lokayukta SP) ದಾವಣಗೆರೆ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ (ಎಸ್‌ಪಿ) ಆ್ಯಂಟನಿ ಜಾನ್ ಜೆ.ಕೆ...

ದಾವಣಗೆರೆಅಪರಾಧರಾಜ್ಯ / ಕರ್ನಾಟಕ

Sand: ಹರಿಹರ ತುಂಗಭದ್ರಾ ನದಿ ಪಾತ್ರದಲ್ಲಿ ಭಾರಿ ಅಕ್ರಮ ಮರಳು ದಂಧೆ ಶಂಕೆ! ನಿಷೇಧಿತ ಯಂತ್ರಗಳು, ತೆಪ್ಪ ಬಳಸಿ ಮರಳು ಲೂಟಿ!

ಹರಿಹರ (Sand):ದಾವಣಗೆರೆ ಜಿಲ್ಲೆಯ ಹರಿಹರ ನಗರ ವ್ಯಾಪ್ತಿಯ ತುಂಗಭದ್ರಾ ನದಿಯಲ್ಲಿ ಕಾನೂನು ಬಾಹಿರವಾಗಿ ಮರಳು ಗಣಿಗಾರಿಕೆ...

ದಾವಣಗೆರೆ

Mobile: ವಿದ್ಯಾರ್ಥಿಗಳಲ್ಲಿ ಛಲ ಮತ್ತು ಏಕಾಗ್ರತೆ ಬರಲು ಮೊಬೈಲ್ ಗೀಳಿನಿಂದ ದೂರವಿರಬೇಕು: ದಾ.ವಿ.ವಿ ಉಪಕುಲಪತಿ ಡಾ. ಬಿ.ಇ. ರಂಗಸ್ವಾಮಿ

ದಾವಣಗೆರೆ(Mobile): ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ದೂರವಿದ್ದಾಗ ಮಾತ್ರ ಅವರ ಸಾಧನೆಗೆ ಅಗತ್ಯವಾದ ಛಲ ಮತ್ತು ಏಕಾಗ್ರತೆ...