ಮುಸ್ಲಿಂರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ: ಹನೀಫ್ ರಜಾ ಖಾದ್ರಿ ಸಲಹೆ

ಹನೀಫ್ ರಜಾ ಖಾದ್ರಿ
ದಾವಣಗೆರೆ: ಮುಸ್ಲಿಂ ಒಕ್ಕೂಟದ ವತಿಯಿಂದ ಈಚೆಗೆ ನಗರದ ಬೂದಾಳ್ ರಸ್ತೆಯ ತಾಜ್ ಪಾಲ್ಯೇಸ್ ನಲ್ಲಿ ಮುಸಲ್ಮಾನರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಕುರಿತು ಚಿಂತನ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಂಜಿಮ್ ಉಲೇಮಯೆ ಅಹಲೆ ಸುನ್ನತ್ ಕಮಿಟಿಯ ಅಧ್ಯಕ್ಷ ಮೌಲಾನಾ ಹಜರತ್ ಹನೀಫ್ ರಜಾ ಖಾದ್ರಿ, ನಮ್ಮ ಸಮಾಜ ಸರ್ಕಾರದ ಅನೇಕ ಸೌಲಭ್ಯಗಳನ್ನು ಪಡೆಯದೆ ಇರುವುದೇ ಆರ್ಥಿಕ ಹಿನ್ನಡೆಗೆ ಕಾರಣವಾಗಿದ್ದು, ಅನೇಕ ಬಡವರಿಗೆ ಸರ್ಕಾರ ಸವಲತ್ತುಗಳನ್ನು ನೀಡುವ ಬಗ್ಗೆ ಮಾಹಿತಿಯ ಕೊರತೆಯಿದೆ. ಆದ್ದರಿಂದ ಇದರ ಬಗ್ಗೆ ಸಮಾಜಕ್ಕೆ ಜಾಗೃತಿ ಮೂಡಿಸಲು ವಿದ್ಯಾವಂತ ಯುವಕರು ಮುಂದೆ ಬರಬೇಕಾಗಿದೆ ಎಂದು ಕರೆನೀಡಿದರು.
ಇಸ್ಲಾಂ ಧರ್ಮದಲ್ಲಿ ಶಿಕ್ಷಣಕ್ಕೆ ಬಹಳ ಮಹತ್ವ ನೀಡಲಾಗಿದೆ. ಅದರಿಂದ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪೋಷಕರ ಆದ್ಯ ಕರ್ತವ್ಯವಾಗಿದೆ. ಯುವಕರು ದುಶ್ಚಟಕ್ಕೆ ದಾಸರಾಗದೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ ಎಂದರು.
ಇತ್ತಿಚಿನ ದಿನಗಳಲ್ಲಿ ದೇಶದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಮುಸಲ್ಮಾನರಿಗೆ ಭಾರಿ ಹಿನ್ನಡೆ ಉಂಟಾಗಿದೆ.ದಾವಣಗೆರೆ ಜಿಲ್ಲೆಯಲ್ಲಿ ಮುಸಲ್ಮಾನರು ಅನೇಕ ಸಮಾಜದ ಮುಖಂಡರಿಗೆ ರಾಜಕೀಯ ಶಕ್ತಿ ನೀಡಿದರೆ ಅದರಿಂದ ಬರುವ ಚುನಾವಣೆಯಲ್ಲಿ ಮುಸಲ್ಮಾನರಿಗೆ ರಾಜಕೀಯ ಶಕ್ತಿ ನೀಡಲು ಎಲ್ಲಾ ಸಮಾಜಗಳು ಸಹಕಾರ ನೀಡಬೇಕು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 80 ಸಾವಿರಕ್ಕಿಂತಲು ಹೆಚ್ಚು ಮುಸ್ಲಿಂ ಮತದಾರರಿದ್ದು ಬರುವ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಗೆಲ್ಲಿಸಲು ರಾಜಕೀಯ ಪಕ್ಷಗಳು ಸಹಕಾರ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ದಾವಣಗೆರೆ ಮುಸ್ಲಿಂ ಒಕ್ಕೂಟದ ಸಂಚಾಲಕರಾದ ನಜೀರ್ ಅಹ್ಮದ್, ವಕೀಲ ಮೌಲಾನಾ ಇಲಿಯಾಜ್ ಖಾದ್ರಿ, ಮೌಲಾನಾ ಮುಫ್ತಿ ರಿಜ್ವನ್ ನೂರಿ, ಮೌಲಾನಾ ಮುಫ್ತಿ, ಶಮಿವುಲ್ಲಾ, ಖಾದ್ರಿ ಮೌಲಾನಾ ಮುಫ್ತಿ ಹಯಾತವುಲ್ಲಾಸಾಬ್, ಮೌಲಾನಾ ಶಹೀದ್ ರಜ, ಮೌಲಾನಾ ಸೈಯದ್ ಮುತ್ಯರ್ ಅಹ್ಮದ್, ಸೈಯದ್ ರಿಯಾಜ್, ಜೆ.ಅಮನುಲ್ಲಾ ಖಾನ್, ಸೈಯಿದ್ ಚಾರ್ಲಿ, ದಾದಪೀರ್ , ತಾಜ್ ಪಾಲ್ಯೇಸ್ ಅಹ್ಮದ್ ಕಬೀರ್, ಇಬ್ರಾಹಿಂ ಖಲೀಲವುಲ್ಲಾ, ಟಿ.ಅಸ್ಗರ್, ಸಾಜಿದ್ ಅಹ್ಮದ್, ಯು.ಎಂ ಮನ್ಸೂರ್ ಅಲಿ, ಶೋಯೇಬ್ ಮೆಹಬುಬ್, ಸುಭಾನಿ ಮಸೂದ್, ಅಹ್ಮದ್ ಮುಜಾಹೀದ್ ಉಪಸ್ಥಿತರಿದ್ದರು.

 
                         
                       
                       
                       
                       
                       
                       
                      