ಬಂಜಾರ ಸಮಾಜ ಶಿಕ್ಷಣಕ್ಕೆ ಒತ್ತುಕೊಡಿ: ಶ್ರೀ ಸೇವಾಲಾಲ್ ಸ್ವಾಮೀಜಿ

ಶ್ರೀ ಸೇವಾಲಾಲ್ ಸ್ವಾಮೀಜಿ
ದಾವಣಗೆರೆ: ಬಂಜಾರ ಸಮುದಾಯವನ್ನು ಸಂಘಟಿಸುವ ಜತೆಗೆ ಶಿಕ್ಷಣದ ಕಡೆಗೆ ಹೆಚ್ಚು ಒತ್ತುಕೊಡಬೇಕೆಂದು ಶ್ರೀ ಸರದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು.
ಈಚೆಗೆ ಆನಗೋಡಿನ ಶ್ರೀ ಮರುಳಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಹಿರಿಯ ವಕೀಲರಾದ ಬಿ.ಜಿ. ಚಂದ್ರಪ್ಪ ಸ್ನೇಹಿತರ ಬಳಗದಿಂದ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ್‌ರ ೨೮೪ನೇ ಜಯಂತ್ಯುತ್ಸವದಲ್ಲಿ ಅವರು ಸಾನಿಧ್ಯ ವಹಿಸಿ, ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಬಿಜೆಪಿ ಮುಖಂಡ ಹೆಚ್.ಎಸ್. ನಾಗರಾಜ್ ಮಾತನಾಡಿ, ಜಾತ್ಯಾತೀತ ಮತ್ತು ಧರ್ಮಾತೀತ ವ್ಯಕ್ತಿಗಳಲ್ಲಿ ಬಿ.ಜಿ. ಚಂದ್ರಶೇಖರಪ್ಪ ಒಬ್ಬರಾಗಿದ್ದು, ಸದಾ ನಿಮ್ಮೆಲ್ಲರ ಬೆಂಬಲ ಇದ್ದರೆ ಅವರು ಶಾಸಕರಾಗಲು ಅನುಮಾನವಿಲ್ಲ ಎಂದರು.
ಈ ಸಂದರ್ಭದಲ್ಲಿ ಕೈಗಾರಿಕೋದ್ಯಮಿ ಮೋಹನಕುಮಾರ್, ಎಂ.ಟಿ. ಸುಭಾಶ್ಚಂದ್ರ, ಹಿರಿಯ ವಕೀಲ ಬಿ.ಜಿ. ಚಂದ್ರಶೇಖರಪ್ಪ, ಡಿ. ಸೂರ್ಯನಾಯ್ಕ್, ಸಂತೋಷನಾಯ್ಕ್, ಗೋಪಾಲ್‌ನಾಯ್ಕ್, ವಸಂತನಾಯ್ಕ್, ಕೃಷ್ಣ ನಾಯ್ಕ್ ಮತ್ತಿತರರು ಇದ್ದರು.