ಕರ್ನಾಟಕದಲ್ಲಿ ಮಾರ್ಚ್ 12 ರಂದು ಮಳೆಯ ಲಕ್ಷಣ

Rainfall in Karnataka on March 12

ಕರ್ನಾಟಕದಲ್ಲಿ ಮಾರ್ಚ್ 12 ರಂದು ಮಳೆಯ ಲಕ್ಷಣ

ದಾವಣಗೆರೆ: ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಂಜೆ, ರಾತ್ರಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಒಣ ಹವೆ ಮುಂದುವರಿಯಲಿದೆ.
ಈಗನ ಮುನ್ಸೂಚನೆಯಂತೆ ಇವತ್ತಿನಿಂದ ರಾಜ್ಯದ ದಕ್ಷಿಣ ಕರಾವಳಿ ಭಾಗಗಳಲ್ಲಿ ಮಳೆ ಮೋಡಗಳು ಕಾಣಿಸಿಕೊಳ್ಳಲಿದ್ದು, ಮಾರ್ಚ್ 16ರ ತನಕ ಈ ಮೋಡಗಳ ಸರಣಿ ಮುಂದುವರಿಯಲಿದೆ.
ಮಾರ್ಚ್ 15 ಹಾಗೂ 16ರಂದು ರಾಜ್ಯದ ಕರಾವಳಿ ಸೇರಿದಂತೆ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕೊಡಗು, ಕುದುರೆಮುಖ, ಶಿೃಂಗೇರಿ, ತೀರ್ಥಹಳ್ಳಿ, ಹೊಸನಗರ, ಸಾಗರ ಸುತ್ತಮುತ್ತ ಸ್ವಲ್ಪ ಜಾಸ್ತಿ ಇರಬಹುದು. ಇದರ ಪ್ರಭಾವದಿಂದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ, ಕಾರ್ಕಳ ಸುತ್ತಮುತ್ತ ಭಾಗಗಳಲ್ಲಿ ಸಹ ಗುಡುಗು ಸಹಿತ ಸಾಮಾನ್ಯ ಮಳೆಯ ಸಾಧ್ಯತೆ ಇದೆ.
ಮಾರ್ಚ್ 17ರಿಂದ ಕರ್ನಾಟಕ ಹೊರತುಪಡಿಸಿ ದೇಶದ ಅನೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ.

Leave a Reply

Your email address will not be published. Required fields are marked *

error: Content is protected !!