ಪಾಲಿಕೆ ವ್ಯಾಪ್ತಿಯಲ್ಲಿ ಸಭೆ-ಸಮಾರಂಭಕ್ಕೆ ಅನುಮತಿ ಕಡ್ಡಾಯ

ದಾವಣಗೆರೆ :ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಭೆ ಸಮಾರಂಭಗಳನ್ನು ಆಯೋಜಿಸುವ ಮುನ್ನ ನಿಗಧಿತ ಸೇವಾ ಶುಲ್ಕವನ್ನು ಪಾವತಿಸಿ ಅನುಮತಿಯನ್ನು ಪಡೆಯಬೇಕು ಎಂದು ಮಹಾನಗರಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.
ಅನುಮತಿಯನ್ನು ಪಡೆಯದೇ ಜಾಹೀರಾತಿ ಫಲಕಗಳು/ಬ್ಯಾನರ್/ಹೋರ್ಡಿಂಗ್ಸ್/ ಬಂಟಿಂಗ್ಸ್ ಗಳನ್ನು ಪ್ರದರ್ಶಿಸಿದ್ದಲ್ಲಿ ಅಂತಹ ಜಾಹೀರಾತಿ ಫಲಕಗಳನ್ನು ಅನಧಿಕೃತ ಜಾಹೀರಾತು ಫಲಕಗಳು ಎಂದು ತಿಳಿದು ಈ ಫಲಕಗಳನ್ನು ತೆರವುಗೊಳಿಸಲಾಗುವುದು. ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು.
ಸರ್ಕಾರದ ಆದೇಶದಂತೆ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು/ ಬ್ಯಾನರ್/ ಹೋರ್ಡಿಂಗ್ಸ್/ ಬಂಟಿಂಗ್ಸ್‍ಗಳ ಹಾಗೂ ಇತರೆ ಜಾಹೀರಾತು ಫಲಕಗಳನ್ನು ಬಳಸದಂತೆ ಮತ್ತು ಘನತ್ಯಾಜ್ಯ ನಿರ್ವಹಣೆ ಮಾದರಿಯಲ್ಲಿ ತಿಳಿಸಿರುವಂತೆ ನಗರದ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಭೆ ಸಮಾರಂಭಗಳನ್ನು ಆಯೋಜಕರು, ಮಹಾನಗರಪಾಲಿಕೆಗೆ ನಿಗಧಿತ ಶುಲ್ಕವನ್ನು ಪಾವತಿಸಿ ಪಡೆಯತಕ್ಕದ್ದು ಹಾಗೂ ಸಭೆ ನಂತರ ಸ್ವಚ್ಚತೆಯನ್ನು ಕಾಪಾಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
                         
                       
                       
                       
                       
                       
                       
                      