ಜಪ್ತಿ ಮಾಡಲಾದ ಅಕ್ಕಿ : ಮಾ. 27ಕ್ಕೆ ಬಹಿರಂಗ ಹರಾಜು
ದಾವಣಗೆರೆ : ಜಿಲ್ಲೆಯ ಅನೌಪಚಾರಿಕ ಪಡಿತರ ಪ್ರದೇಶಗಳಲ್ಲಿ ಆಹಾರ ನಿರೀಕ್ಷಕರು ಜಪ್ತಿ ಮಾಡಿಕೊಳ್ಳಲಾದ 167.15 ಕ್ವಿಂಟಾಲ್ ಅಕ್ಕಿಯನ್ನು ಮಾರ್ಚ 27 ರಂದು ಬೆಳಿಗ್ಗೆ 10.30 ಗಂಟೆಗೆ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆ-2 ಎ.ಪಿ.ಎಂ.ಸಿ ಆವರಣದಲ್ಲಿ ಬಹಿರಂಗ ಹರಾಜು ಮಾಡಲಾಗುತ್ತದೆ.
2022 ಮಾ. 22 ರಂದು ನಗರದ ಜಿಲ್ಲಾ ಪಂಚಾಯತ್ ಕಚೇರಿ ಮುಂಬಾಗದ ಎನ್.ಹೆಚ್-48 ಬೈಪಾಸ್ ರಸ್ತೆಯಲ್ಲಿ 158.95 ಕ್ವಿಂಟಾಲ್ ಅಕ್ಕಿ, 2022 ನವೆಂಬರ್ 21 ರಂದು ಕೆ.ಟಿ.ಜೆ ನಗರದ ನಿಸರ್ಗ ಸಂಫಟ್ರ್ಸ ಎದುರು 5.70 ಕ್ವಿಂಟಾಲ್ ಅಕ್ಕಿ, 2023ರ ಜನವರಿ 23 ರಂದು ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿ 2.50 ಕ್ವಿಂಟಾಲ್ ಅಕ್ಕಿ ಸೇರಿದಂತೆ ಒಟ್ಟಾರೆಯಾಗಿ 167.15 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಲಾಗಿದ್ದು, ನಿಗದಿತ ದಿನಾಂಕದಂದು ಅಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಹಾಯಕ ನಿರ್ದೇಶಕರ ಸಮಕ್ಷಮದಲ್ಲಿ ಬಹಿರಂಗ ಹರಾಜು ಮಾಡಲಾಗುವುದು ಎಂದು ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.