ಬೀಳಗಿಯಲ್ಲಿ ಕಿಚ್ಚನ ಕಮಾಲ್.. ರೋಡ್ ಶೋ ನೋಡಲು ಜನಸಾಗರ..

ಬಾಗಲಕೋಟೆ: ನಟ ಕಿಚ್ಚ ಸುದೀಪ್ ಅವರು ಬೀಳಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುರುಗೇಶ್ ಆರ್. ನಿರಾಣಿ ಪರ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ನಡೆಸಿದ ‘ಬೃಹತ್ ರೋಡ್ ಶೋ’ದಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು.
ಶಿವಾಜಿ ಸರ್ಕಲ್ ನಿಂದ ಆರಂಭವಾದ ಬೃಹತ್ ರೋಡ್ ಶೋ ಬಸವೇಶ್ವರ ಸರ್ಕಲ್, ಡಾ. ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಸಾಗಿ ಮುಂದೆ ಗಾಂಧಿ ನಗರದಲ್ಲಿ ಕೊನೆಗೊಂಡಿತು. ಸುದೀಪ್ ಅವರನ್ನು ಕಣ್ತುಂಬಿಕೊಳ್ಳಲು ಹಾಗೂ ನಿರಾಣಿ ಅವರನ್ನು ಬೆಂಬಲಿಸಿ ಕ್ಷೇತ್ರದ ಮೂಲೆ ಮೂಲೆಗಳಿಂದ ಸಹಸ್ರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಜಮಾಯಿಸಿದ್ದರು.
ನಟ ಸುದೀಪ್ ಅವರು ನೆರೆದಿದ್ದ ಜನ ಸಾಗರವನ್ನು ಉದ್ದೇಶಿಸಿ ಮಾತನಾಡಿ, ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿ, ಅಭಿವೃದ್ಧಿಯ ಹರಿಕಾರ ನಿರಾಣಿ ಅವರಿಗೆ ಮತ ನೀಡುವಂತೆ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಎಸ್.ಸಿ. ಮೋರ್ಚಾ ರಾಜಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ಚುನಾಯಿತ ಜನ ಪ್ರತಿನಿಧಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.