ಶಾಮನೂರು ಶಿವಶಂಕರಪ್ಪನವರ ಪರ ಪ್ರಥಮ್ ಪ್ರಚಾರ: ಅಜಾತ ಶತ್ರು ಗೆಲ್ಲಿಸಿ ದಾವಣಗೆರೆ ಅಭಿವೃದ್ಧಿಗೆ ಸಹಕರಿಸಲು ಮನವಿ

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರ ಪರವಾಗಿ ಚಲನಚಿತ್ರ ನಟ, ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಪ್ರಚಾರ ನಡೆಸಿದರು.
ಇಂದು 14ನೇ ವಾರ್ಡ್ನ ವಿವಿಧ ಕಡೆಗಳಲ್ಲಿ ಪ್ರಚಾರ ನಡೆಸಿದ ಪ್ರಥಮ್ ಅವರು ದಾವಣಗೆರೆಯಷ್ಟೇ ಅಲ್ಲ ರಾಜ್ಯಾದ್ಯಂತ ಉತ್ತಮ ಹೆಸರು ಗಳಿಸಿರುವ ಅಜಾತ ಶತ್ರು ಡಾ|| ಶಾಮನೂರು ಶಿವಶಂಕರಪ್ಪನವರನ್ನು ಗೆಲ್ಲಿಸಿ ದಾವಣಗೆರೆಯ ಸಮಗ್ರ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.
ದಾವಣಗೆರೆ ನಗರ ಸಮಗ್ರ ಅಭಿವೃದ್ಧಿ ಆಗಿದ್ದು, ಇನ್ನಷ್ಟು ಅಭಿವೃದ್ಧಿ ಆಗಬೇಕಿದೆ. ದಾವಣಗೆರೆ ಜನತೆ ಅಭಿವೃದ್ಧಿಗೆ ಮತ ನೀಡುವೀರಿ ಎಂಬ ವಿಶ್ವಾಸವಿದೆ. ನಿಮ್ಮ ಮತ ದಾವಣಗೆರೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಡಾ|| ಶಾಮನೂರು ಶಿವಶಂಕರಪ್ಪ, ಉದ್ಯಮಿ ಎಸ್.ಎಸ್.ಗಣೇಶ್, ಮೇಯರ್ ವಿನಾಯಕ ಪೈಲ್ವಾನ್, ಮಹಾನಗರ ಪಾಲಿಕೆ ಸದಸ್ಯ ಕೆ.ಚಮನ್ಸಾಬ್, ಜಾಕೀರ್ ಅಲಿ, ಶಫೀಖ್ ಪಂಡಿತ್, ಎ.ಬಿ.ರಹೀಂ, ಸಿಮೇಎಣ್ಣೆ ಮಲ್ಲೇಶ್ , ಡಾ|| ದೀಪಕ್ ಬೋಂದಾಡೆ, ಅಣಬೇರು ರಾಜಣ್ಣ ಮತ್ತಿತರರಿದ್ದರು.