ಕುಂದುವಾಡದಲ್ಲಿ ಲೋಕಿಕೆರೆ ನಾಗರಾಜ್ ರೋಡ್ ಶೋ
ದಾವಣಗೆರೆ :ನಗರದ ಹಳೇ ಕುಂದುವಾಡದಲ್ಲಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಅವರು ಅಬ್ಬರದ ಪ್ರಚಾರ ಮೂಲಕ ಮತಯಾಚನೆ ಮಾಡಿದರು.
ಕುಂದುವಾಡ ಗ್ರಾಮವೇ ಕೇಸರಿಮಯವಾಗಿತ್ತು, ಭಜರಂಗಿ ಬ್ಯಾನರ್, ಕೇಸರಿ ಬಾವುಟಗಳು ರಾರಾಜಿಸಿದವು, ಈ ಸಂದರ್ಭದಲ್ಲಿ ಮಾತನಾಡಿದ ಲೋಕಿಕೆರೆ ನಾಗರಾಜ್, ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಬಿಜೆಪಿ ಟಿಕೆಟ್ ನೀಡಿದೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಭಿವೃದ್ದಿ ಕೆಲಸ ಮಾಡಿದ್ದು, ಜನರು ಬಿಜೆಪಿಗೆ ಮತ ಹಾಕುವ ಮೂಲಕ ಜಯಶೀಲರನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಪಾಲಿಕೆ ಸದಸ್ಯ ಜೆಎನ್ ಶ್ರೀನಿವಾಸ್, ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್ ಜಿ ಗಣೇಶಪ್ಪ, ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಾಡದ ಆನಂದರಾಜ್, ಹಿಂದು ಗಣಪತಿ ಸಮಿತಿ ಅಧ್ಯಕ್ಷ ಜೊಳ್ಳಿ ಗುರು, ಮುಖಂಡರಾದ ಹನುಮಂತಪ್ಪ, ಜೆಸಿ ದೇವರಾಜ್, ಎನ್ ಟಿ ನಾಗರಾಜ್, ಮಂಜುನಾಥ್ ಸೇರಿದಂತೆ ಮತ್ತಿತರರು ಇದ್ದರು.