ಎಸ್ ಎಸ್ ಎಂ ಗೆ ಕುರುಬ ಸಮಾಜದಿಂದ ಕುರಿ ಕಾಣಿಕೆ

ಎಸ್ ಎಸ್ ಎಂ ಗೆ ಕುರುಬ ಸಮಾಜದಿಂದ ಕುರಿ ಕಾಣಿಕೆ

ದಾವಣಗೆರೆ : ದಾವಣಗೆರೆ ಇಂದು ನಗರದ ಪಿಬಿ ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿ ಆಗಲಿ ಹಾಗೂ ಉತ್ತರ ಮತ್ತು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳು ಸನ್ಮಾನ್ಯ ಶ್ರೀ ಡಾ.ಶಾಮನೂರು ಶಿವಶಂಕರಪ್ಪನವರು ಹಾಗೂ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ಎಸ್ ಎಸ್ ಮಲ್ಲಿಕಾರ್ಜುನ್ ರವರು ಗೆಲುವು ಸಾಧಿಸಲಿ ಎಂದು ಶ್ರೀ ಬೀರಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶ್ರೀಯುತ ಎಸ್ ಎಸ್ ಮಲ್ಲಿಕಾರ್ಜುನ್ ರವರಿಗೆ ಕುರುಬ ಸಮಾಜದ ವತಿಯಿಂದ, ಕರಿಯ ಕಂಬಳಿಯನ್ನು ಓದಿಸಿ ಕುರಿಮರಿಯನ್ನು ( ಟಗರು)ನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ, ಮಾಜಿ ಮೇಯರ್ ಹೆಚ್ ಬಿ ಗೋಣಪ್ಪ ಬಿ ಷಣ್ಮುಖಪ್ಪ ಎಸ್ ಟಿ ಅರವಿಂದ , ಎಚ್ ಬಿ ಪರಶುರಾಮಪ್ಪ ನಿವೃತ್ತ ಇಂಜಿನಿಯರ್ ಎಸ್ ಎಲ್ ಆನಂದಪ್ಪ ಎಸ್ ಎಸ್ ಗಿರೀಶ್ ಆಡಳಿ ಸಿದ್ದಪ್ಪ ಜಮ್ನಳ್ಳಿ ನಾಗರಾಜ್ ಕೆ ರೇವಣಸಿದ್ದಪ್ಪ ಜಯಣ್ಣ ಲಿಂಗರಾಜು ಇಟಿಗುಡಿ ಮಂಜುನಾಥ್ ಎನ್ ಜೆ ನಿಂಗಪ್ಪ ಗುಡ್ಡದ ಪರಮೇಶಿ ಜಿ ಸಿ ನಿಂಗಪ್ಪ,ಜಿಸಿ ಬಸವರಾಜು, ಸಮಾಜದ ಮುಖಂಡ ಹಾಗೂ ಉತ್ತರ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ ಮನು ಎಚ್ ವೈ ಶಶಿಧರ್ ಚೌಡಪ್ಪ ಜೆಬಿ ದೀಪಕ್ ಪ್ರೊಫೆಸರ್ ಎಲ್ಲಪ್ಪ ಸಾಲ್ಮನೆ ಬಸವರಾಜ್ ದಿಟ್ಟೂರು ಚಂದ್ರ ಎಮ್ ಮಂಜುನಾಥ್ ಕುಗ್ಗನೂರು ಮಂಜು,ಗುಡ್ಡಳ್ಳಿ ಪರಮೇಶ್,ಕಲಾಚಾರಿ, ಉತ್ತರ ವಲಯ ಮಹಿಳಾ ಉಪಾಧ್ಯಕ್ಷ ಶ್ರೀಮತಿ ಮಾಲಾ ಹನುಮಂತಪ್ಪ , ಸೊಪ್ಪಿನ ಪುಷ್ಪ, ಮಂಜುಳಾ , ಗೀತಾ ದಿಳ್ಳಪ್ಪ ಸಮಾಜದ ಹಿರಿಯರು, ಮುಖಂಡರು, ಯುವಕರು, ಮಹಾನಗರ ಪಾಲಿಕೆಯ ಸದಸ್ಯರುಗಳು, ಹಾಗೂ ಸಿದ್ದರಾಮಯ್ಯನವರ ಅಭಿಮಾನಿಗಳು ಎಸ್ ಎಸ್ ಎಮ್ ಹಾಗೂ ಎಸ್ ಎಸ್ ಅಭಿಮಾನಿಗಳು ಕುರುಬ ಸಮಾಜ ಬಾಂಧವರು ಉಪಸ್ಥಿತರಿದ್ದರು.

ಎಸ್ ಎಸ್ ಎಂ ಗೆ ಕುರುಬ ಸಮಾಜದಿಂದ ಕುರಿ ಕಾಣಿಕೆ

Leave a Reply

Your email address will not be published. Required fields are marked *

error: Content is protected !!