ಹರಿಹರ ಸಬ್ ರಿಜಿಸ್ಟರ್ ಕಚೇರಿಯ ಸ್ಟಾಂಪ್ ವೆಂಡರ್ ಲೋಕಾಯುಕ್ತ ಬಲೆಗೆ

ಹರಿಹರ : ಮನೆ ಖರೀದಿ ಮಾಡಿದ ಸೇಲ್ ಡೀಡ್ ನೊಂದಣಿ ಪತ್ರ ನೀಡಲು ಲಂಚದ ಬೇಡಿಕೆ ಇಟ್ಟು ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಬ್ ರಿಜಿಸ್ಟರ್ ಕಚೇರಿಯ ದಸ್ತಾವೇಜು ಬರಹಗಾರನನ್ನು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಸಬ್ ರಿಜಿಸ್ಟರ್ ಕಚೇರಿಯ ಎಂ.ಬಿ.ಪರಮೇಶ್ವರ್ ಲೋಕಾಯುಕ್ತ ಬಲೆಗೆ ಬಿದ್ದ ದಸ್ತಾವೇಜು ಬರಹಗಾರ. ಹರಿಹರದ ಮಂಜುನಾಥ್ ಎನ್ನುವರ ಬಳಿ ಮನೆ ಖರೀದಿ ಮಾಡಿದ ಸೇಲ್ ಡೀಡ್ ನೊಂದಣಿ ಪತ್ರ ನೀಡಲು ಪರಮೇಶ್ವರ 20ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು.
ಈ ಕುರಿತು ಮಂಜುನಾಥ್ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಶನಿವಾರ ರಾತ್ರಿ ಸಬ್ ರಿಜಿಸ್ಟರ್ ಕಚೇರಿ ಬಳಿ 13 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಪರಮೇಶ್ವರ್ ಬಿದ್ದಿದ್ದಾರೆ.
ದಾಳಿಯ ವೇಳೆ ಅರೋಪಿಯಿಂದ 40 ಸಾವಿರ ನಗದು ಸೇರಿದಂತೆ ವಿವಿಧ ದಾಖಲೆಗಳ ವಶ ಪಡಿಸಿಕೊಳ್ಳಲಾಗಿದೆ.
ದಾಳಿಯಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರೆ, ಇನ್ಸ್ ಪೆಕ್ಟರ್ ರಾಷ್ಟ್ರಪತಿ ಎಚ್.ಎಸ್.ಅಂಜನೇಯ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ದಾಳಿ ನಡೆಸಿತ್ತು.