ಅವರಗೆರೆಯಲ್ಲಿ ಇಪ್ಟಾ ಸಂಸ್ಥಾಪನಾ ದಿನಾಚರಣೆ

ದಾವಣಗೆರೆ :ಅವರಗೆರೆಯಲ್ಲಿ ಭಾರತೀಯ ಜನಕಲಾ ಸಮಿತಿ ಇಪ್ಟಾ ದ 80 ನೇ ಸಂಸ್ಥಾಪನಾ ದಿನ ವನ್ನ ಆಚರಿಸಲಾಯಿತು.ಈ ಸಂದರ್ಭದಲ್ಲಿ ಸಿಪಿಐನ ಜಿಲ್ಲಾಕಾರ್ಯದರ್ಶಿ ಆವರಗೆರೆ ಚಂದ್ರು, ಕಾರ್ಮಿಕ ಮುಖಂಡ ಮರಿಯಪ್ಪ, ನಾಗೇಂದ್ರಪ್ಪ, ಎಐವೈಎಫ್ ಕಾರ್ಯದರ್ಶಿ ತಿಪ್ಪೇಶ್, ಎನ್. ಟಿ. ತಿಪ್ಪೇಶ್, ಚನ್ನಬಸಪ್ಪ ಹಾಗೂ ಇಫ್ಟಾದ ಜಿಲ್ಲಾಧ್ಯಕ್ಷ ಐರಣಿ ಚಂದ್ರು, ಪ್ರಧಾನ ಕಾರ್ಯದರ್ಶಿ ಆವರಗೆರೆ ಬಾನಪ್ಪ, ಶರಣಪ್ಪ ಶ್ಯಾಗಲೆ, ಜಿಲ್ಲಾ ಸಂಚಾಲಕರಾದ ಪಿ. ಖಾದರ್ ಮತ್ತಿತರರು ಭಾಗವಹಿಸಿದ್ದರು.