ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿ: ಮೊಹಮ್ಮದ್ ಜಿಕ್ರಿಯಾ

ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿ: ಮೊಹಮ್ಮದ್ ಜಿಕ್ರಿಯಾ

ದಾವಣಗೆರೆ: ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಹೀನಾಯ ಸ್ಥಿತಿಗೆ ಒಳಪಟ್ಟಿದ್ದು, ಈ ನಿಟ್ಟಿನಲ್ಲಿ ನೂತನ ಸರ್ಕಾರ ತನ್ನ ಮೊದಲ ಆದ್ಯತೆಯಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಲು, ಬೆಳೆಸಲು ಹಾಗೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜವಾಹರ್ ಬಾಲ್ ಮಂಚ್ ದಾವಣಗೆರೆ ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಹಿಂದಿನ ಸರ್ಕಾರದಲ್ಲಿ ಸರ್ಕಾರಿ ಶಾಲಾ ಮಕ್ಕಳ ಪರವಾಗಿ ಯಾವುದೇ ಯೋಜನೆಗಳನ್ನು ಕೈಗೊಂಡಿದ್ದಿಲ್ಲ ಕೇವಲ ತನ್ನ ಪ್ರತಿಷ್ಠೆಗಾಗಿ ಇಲ್ಲ ಸಲ್ಲದ ವಿವಾದವನ್ನು ಎಬ್ಬಿಸಿ ಮಕ್ಕಳ ಮನಸ್ಸಿನಲ್ಲಿ ವಿದ್ಯಾಭ್ಯಾಸಕ್ಕಿಂತ ಹೆಚ್ಚು ಧರ್ಮದ ಆಧಾರದ ಮೇಲೆ ಶಿಕ್ಷಣ ನೀಡುವ ಯೋಜನೆ ಮಾಡಿಕೊಂಡಿತ್ತು, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡದೆ,ಮೂಲ ಸೌಕರ್ಯಗಳಾದ ಶೊ, ಸಾಕ್ಸ್,ಪಠ್ಯ ಪುಸ್ತಕಗಳನ್ನು ಸಹ ಸಮಯಕ್ಕೆ ಸರಿಯಾಗಿ ನೀಡದೆ ಮಕ್ಕಳ ಭವಿಷ್ಯದ ಜೊತೆ ಅವರ ಕನಸುಗಳ ಜೊತೆ ಚೆಲ್ಲಾಟವಾಡುವ ಕಾರ್ಯವನ್ನು ಮಾಡುತ್ತಾ ಬಂದಿತ್ತು ಇದೆಲ್ಲದಕ್ಕೂ ನೂತನ ಸರ್ಕಾರ ಕಡಿವಾಣ ಹಾಕಿ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿ ಪ್ರಾಥಮಿಕ ಹಂತದಲ್ಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸರ್ಕಾರಿ ಶಾಲಾ ಮಕ್ಕಳು ಅಂದರೆ ಅಸಡ್ಡೆಯಾಗಿ ನೋಡುವ ಥರ ಆಗಿಬಿಟ್ಟಿದೆ ಈ ಅಪವಾದವನ್ನು ಹೋಗಲಾಡಿಸಿ ಶಾಲೆಗಳ ಅಭಿವೃದ್ಧಿಗೆ ಹಾಗೂ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆ ಕ್ರೀಡೆ,ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಕಲಿಕಾಸಕ್ತಿ ಹೆಚ್ಚಿಸಲು ಪ್ರಥಮ ಬಜೆಟ್ ನಲ್ಲಿ ಸೂಕ್ತ ಅನುದಾನ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಸರ್ಕಾರಿ ಶಾಲಾ ಹೆಣ್ಣುಮಕ್ಕಳಿಗೆ ಹಾಜರಾತಿಗನುಗುಣವಾಗಿ ಪ್ರೋತ್ಸಾಹ ಧನ ಪ್ರತಿದಿನ ಎರಡು ರೂಪಾಯಿ ನೀಡುವ,ಹಾಗೂ ಕ್ಷೀರಭಾಗ್ಯದಂಥಾ ಯೋಜನೆ ಕೈಗೊಳ್ಳಲಾಗಿತ್ತು ಈ ಬಾರಿಯೂ ಇಂಥಾ ಯೋಜನೆ ಕೈಗೊಂಡರೆ ಮಕ್ಕಳ ಹಾಜರಾತಿ ಹೆಚ್ಚಿಸುವುದರ ಜೊತೆಗೆ ಬಡ ಮಕ್ಕಳಲ್ಲಿ ಶಿಕ್ಷಣದ ಕೊರತೆ ನೀಗಿಸುವಲ್ಲಿ ಸಹಾಯವಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಜವಾಹರ್ ಬಾಲ್ ಮಂಚ್ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ವಿಶೇಷವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರೋತ್ಸಾಹಿಸಿ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಹಂತ ಹಂತವಾಗಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೇಳಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!