ಸುಳ್ಳು ದಾಖಲೆ ಸೃಷ್ಟಿಸಿ 3 ಸೈಟ್ಗಳ ಕರಾರು: ಆರ್ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಬಂಧನಕ್ಕೆ ಆಗ್ರಹ
ದಾವಣಗೆರೆ: ನಕಲಿ ದಾಖಲೆಗಳನ್ನು ಸೃಷ್ಠಿಮಾಡಿ ಆಸ್ತಿ ಕ್ರಯದ ಕರಾರು ಪತ್ರ ನೋಂದಣಿ ಮಾಡಿಸಲಾಗಿದೆ ಈ ಬಗ್ಗೆ ಐದು ಮಂದಿ ಮೇಲೆ ದೂರು ನೀಡಲಾಗಿದೆ ಎಂದು ಆಸ್ತಿ ಮಾಲೀಕರಾದ ಕೆ.ಬಾಬುರಾವ್ ಹೇಳಿದರು.
ಆರ್ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಬಂಧನಕ್ಕೆ ಆಗ್ರಹ
ನನ್ನ ಪತ್ನಿ ಜಯಶ್ರೀ ಹೆಸರಿನಲ್ಲಿರುವ ಆವರಗೆರೆ ಸರ್ವೇ ನಂಬರ್ 240/2ಬಿಯಲ್ಲಿನ ಮೂರು ನಿವೇಶನಗಳನ್ನು ಎಚ್. ಹರೀಶ್ ಅಲಿಯಾಸ್ ಹರೀಶ್ ಹಳ್ಳಿ ಎಂಬುವರು, ಜಯಶ್ರೀ ಹೆಸರಿನ ಬೇರೆ ಮಹಿಳೆಯನ್ನು, ಮಾರ್ಚ್ 20ರಂದು ದಾವಣಗೆರೆ ಉಪ ನೋಂದಣಾಕಾರಿಗಳ ಕಚೇರಿಗೆ ಕರೆದೊಯ್ದು, ನಕಲಿ ದಾಖಲೆ ಸೃಷ್ಟಿಸಿ, ಕ್ರಯದ ಕರಾರು ಪತ್ರ ಮಾಡಿಸಿದ್ದಾರೆ.
ಈ ಕುರಿತು ದಾವಣಗೆರೆ ಗಾಂಧಿನಗರ ಠಾಣೆಯಲ್ಲೂ ದೂರು ದಾಖಲಿಸಿದ್ದೇವೆ ಎಂದು ವಂಚನೆಗೆ ಒಳಗಾದ ಮಹಿಳೆ ಜಯಶ್ರೀ ಪತಿ ಕೆ. ಬಾಬುರಾವ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಮೂಲತಃ ಚನ್ನಗಿರಿ ತಾಲೂಕಿನ ಕಣಿವೆಬಿಳಚಿ ಗ್ರಾಮದ ನಿವಾಸಿಗಳಾಗಿದ್ದು, ಈಗ ದಾವಣಗೆರೆಯ ಸರಸ್ವತಿ ನಗರದಲ್ಲಿ ನೆಲೆಸಿದ್ದೇವೆ.
ನನ್ನ ಪತ್ನಿ ಜಯಶ್ರೀ ಹೆಸರಿನಲ್ಲಿರುವ 3 ಸೈಟುಗಳನ್ನು ಹರೀಶ್ ಹಳ್ಳಿ ನಕಲಿ ದಾಖಲೆ ಸೃಷ್ಟಿಸಿ ಕ್ರಮದ ಕರಾರು ಮಾಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಮೂರು ನಿವೇಶಗಳ ಕ್ರಯ ಪತ್ರ ಮಾಡಿಸಿರುವ ವ್ಯಕ್ತಿ ಹಾಗೂ ಇದಕ್ಕೆ ಸಹಕರಿಸಿದ ಹಿರಿಯ ಉಪನೋಂದಣಾಕಾರಿ ಸೇರಿದಂತೆ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ.
ನನ್ನ ಪತ್ನಿ ಹೆಸರು ಹೇಳಿಕೊಂಡು ಬಂದಿರುವ ಮಹಿಳೆ ಹಾಗೂ ಇವರಿಗೆ ಸಹಕಾರ ನೀಡಿದ ಬಿ.ಲಿಂಗರಾಜ್, ಹಿರಿಯ ಉಪನೋಂದಣಾಕಾರಿ ಹಾಗೂ ಪತ್ರಕ್ಕೆ ಸಾಕ್ಷಿ ಹಾಕಿರುವ ಇಬ್ಬರು ವ್ಯಕ್ತಿಗಳನ್ನು ಬಂಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡು ಕೆಲವರನ್ನು ಗುರಿಯಾಗಿಸಿಕೊಂಡು ಮೋಸ ಮಾಡುತ್ತಿರುವ ಹರೀಶ್ ಹಳ್ಳಿಯನ್ನು ದಾವಣಗೆರೆಯಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬಣಜಾರ ಕೆಂಪರಾಜ್, ಕೆ. ಮುರುಳಿ, ಕೆ.ಎಂ. ಕೃಷ್ಣಮೂರ್ತಿ ಇದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆವರಗೆರೆ ಗ್ರಾಮದ ಸ.ನಂ 240/ 2ಬಿ ರಲ್ಲಿ ಅಲಿನೇಷನ್ ಆಗಿ ಡೋರ್ ನಂಬರ್ ಆಗಿರುವ 3 ನಿವೇಶನಗಳ ಕ್ರಯ ಕರಾರು ಪತ್ರ ನೊಂದಣಿಯನ್ನು 2005 ಮಾರ್ಚ್ 7 ರಲ್ಲಿ ನನ್ನ ಪತ್ನಿ ಜಯಶ್ರೀ ಅವರ ಹೆಸರಿಗೆ ಕ್ರಯಖಾತೆ ಪಡೆದಿದ್ದೇವೆ. ಆದರೆ ಇತ್ತೀಚೆಗೆ ಹೆಚ್.ಆರ್ ಹರೀಶ್/ಹರೀಶ್ ಹಳ್ಳಿ ಎಂಬುವವರು ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದಾರೆ ಅಲ್ಲದೇ ಯಾವುದೋ ಮಹಿಳೆಯೊಬ್ಬರಿಂದ ನಕಲಿ ಕ್ರಯದ ಕರಾರು ಪತ್ರ ನೋಂದಣಿ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಇದಲ್ಲದೇ ಹಿರಿಯ ಉಪನೋಂದಣಾಧಿಕಾರಿಗಳು ಕೂಡ ಕೂಲಂಕುಷವಾಗಿ ದಾಖಲೆಗಳನ್ನು ಪರಿಶೀಲಿಸದೇ ಹರೀಶ್ ಎಂಬಾತನ ಜೊತೆ ಶಾಮೀಲಾಗಿ ಅಕ್ರಮ ಕ್ರಯದ ಕರಾರು ಪತ್ರ ನೊಂದಣಿ ಮಾಡಿದ್ದಾರೆ.ಕಾನೂನು ಬಾಹಿರವಾಗಿ ಅಧಿಕಾರ ದುರುಪಯೋಗ ಮಾಡಿದ್ದಾರೆ ಈ ಬಗ್ಗೆ ಹರೀಶ್ ಸೇರಿದಂತೆ ಐದು ಮಂದಿ ಮೇಲೆ ಗಾಂಧಿನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ ನಮಗೆ ಆದ ಅನ್ಯಾಯ ಮತ್ತೊಬ್ಬರಿಗೆ ಆಗಬಾರದು ಎಂದು ನ್ಯಾಯ ಕೇಳಿ ಬಂದಿದ್ದೇವೆ ಎಂದರು.
ಈ ಕೂಡಲೇ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ಬಣಜಾರ ಕೆಂಪರಾಜ್, ಕೆ.ಮುರಳಿ, ಕೆ.ಎಂ ಕೃಷ್ಣಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.