ಮೀಸೆ ಚಿಗುರುವ ಮುನ್ನವೇ ಬೈಕ್ ಕಳ್ಳತನ ಮಾಡಿ ಸಿಕ್ಕಿಬಿದ್ದರು ಬೈಕ್ ಕಳ್ಳತನ ಪ್ರಕರಣ ಪತ್ತೆ: ಮೂವರ ಬಂಧನ, 7 ಬೈಕ್‌ಗಳ ವಶ     

ಮೀಸೆ ಚಿಗುರುವ ಮುನ್ನವೇ ಬೈಕ್ ಕಳ್ಳತನ ಮಾಡಿ ಸಿಕ್ಕಿಬಿದ್ದರು ಬೈಕ್ ಕಳ್ಳತನ ಪ್ರಕರಣ ಪತ್ತೆ: ಮೂವರ ಬಂಧನ, 7 ಬೈಕ್‌ಗಳ ವಶ     

ದಾವಣಗೆರೆ: ಕಳೆದ ಮೇ 23ರಂದು ಸಿನಿಲ್ ಕುಮಾರ್ ಎಂಬುವವರು ತಮ್ಮ ಯಮಹಾ ಬೈಕ್ ಕಳ್ಳತನವಾಗಿರುವುದಾಗಿ ಕೆಟೆಜೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರು ತನಿಖೆ ನಡೆಸಿರುವ ಪೊಲೀಸರು ಮೂವರನ್ನು ಬಂಧಿಸಿ 7 ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳ್ಳತನದ ಪ್ರಕರಣದಲ್ಲಿ ಇವರು ಭಾಗಿಯಾಗಿದ್ದಾರೆ. ಕೆಟಿಜೆ ನಗರ, ವಿದ್ಯಾನಗರ, ಮಲೇಬೆನ್ನೂರು ಪೊಲೀಸ್ ಠಾಣೆ, ಹದಡಿ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಕಳ್ಳತನ ಹಾಗೂ ಚನ್ನಗಿರಿ ಠಾಣೆಯಲ್ಲಿ 3 ಬೈಕ್ ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ.

ಪ್ರಕರಣ ಬೇಧಿಸಿರುವ ಪೊಲೀಸರು ದಾವಣಗೆರೆ ಸರಸ್ವತಿ ನಗರದ ರಾಕೇಶ್ ಕೆ.ಎಲ್. (19) ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಬಂಧಿಸಿದ್ದಾರೆ.

ಬೈಕ್ ಕಳ್ಳತನ ಪ್ರಕರಣದಲ್ಲಿ ಆರೋಪಿತರ ಪತ್ತೆ ಮತ್ತು ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಶಶಿಧರ ಯು.ಜೆ ಹಾಗು ಪ್ರೋಬೇಷನರಿ ಡಿವೈಎಸ್‌ಪಿ ಯಶವಂತಕುಮಾರ ಎಸ್.ಬಿ ನೇತೃತ್ವದ ತಂಡದ ಪಿ.ಎಸ್.ಐ ಎನ್.ಆರ್ ಕಾಟೆ, ವಿಶ್ವನಾಥ ಜಿ ಎನ್, ಎ.ಎಸ್.ಐ ಜಯಪ್ಪ ಬಿ ಹಾಗು ಸಿಬ್ಬಂದಿಗಳಾದ ಶಂಕರ್ ಜಾದವ್, ಪ್ರಕಾಶ ಟಿ, ತಿಮ್ಮಣ್ಣ ಎನ್.ಆರ್, ಎಮ್.ಮಂಜಪ್ಪ, ಶಿವರಾಜ್ ಎಮ್ ಎಸ್, ಷಣ್ಮುಖ ಕೆ, ಸತೀಶ, ತಿಪ್ಪೇಸ್ವಾಮಿ ಮತ್ತು ರಾಘವೇಂದ್ರ, ಶಾಂತರಾಜ ಇವರುಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಅರುಣ ಕೆ. ಶ್ಲ್ಯಾಘಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!