ಡಾ. ಶಾಮನೂರು ಶಿವಶಂಕರಪ್ಪರಿಗೆ ಹಾಲಕೆರೆ ಜಗದ್ಗುರುಗಳ ಆಶೀರ್ವಾದ.
ದಾವಣಗೆರೆ: ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು, ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ನವರನ್ನು 93ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಜಗದ್ಗುರು ಶ್ರೀ ಮ. ನಿ. ಪ್ರ.ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು ಶಾಲು ಹೊದಿಸಿ ಸನ್ಮಾನಿಸಿ ಆಶೀರ್ವದಿಸಿದರು.
ಶ್ರೀ ಗಳವರು ಡಾ. ಎಸ್ಸೆಸ್ ರವರ ಮನೆಗೆ ಆಗಮಿಸುತ್ತಿದ್ದಂತೆ ಅವರ ಕುಟುಂಬದ ವರ್ಗದವರು ಪಾದಪೂಜೆ ನೆರವೇರಿಸಿ ಆರತಿ ಬೆಳಗಿ ಸ್ವಾಗತಿಸಿದರು. ನಂತರ ಶಾಸಕರು ಸಹ ಶ್ರೀಗಳವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶ್ರೀ ಅನ್ನದಾನೇಶ್ವರ ಮಠದ ಅಧ್ಯಕ್ಷರಾದ ಡಾ. ಅಥಣಿ ಎಸ್ ವೀರಣ್ಣ ,ಪ್ರಧಾನ ಕಾರ್ಯದರ್ಶಿ, ಎನ್ ಅಡಿವೆಪ್ಪ, ಉಪಾಧ್ಯಕ್ಷ ಅಮರಯ್ಯ ಗುರುವಿನ ಮಠ, ಶಿವಪುತ್ರಪ್ಪ, ಪಾಲಿಕೆ ಸದಸ್ಯರಾದ ಗಡಿ ಗುಡಾಳ್ ಮಂಜುನಾಥ್, ಎ ನಾಗರಾಜ್ ,ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ, ಶ್ರೀಮಠದ ಟ್ರಸ್ಟಿ ಪತ್ರಕರ್ತ ವೀರಪ್ಪ ಎಂ ಭಾವಿ ಮತ್ತಿತರರು ಉಪಸ್ಥಿತರಿದ್ದರು.