ಬಿ ಎ ವಿದ್ಯಾರ್ಥಿಗಳಿಂದ “ಕಲಾ ಪರ್ವ “ ಕಲಾ ವಿದ್ಯಾರ್ಥಿಗಳಿಗೆ ಬಿಳ್ಕೊಡಿಗೆ
ದಾವಣಗೆರೆ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಾ ವಿಭಾಗದಿಂದ ಬಿ ಎ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಅಂತಿಮ ವರ್ಷದ ಕಲಾ ವಿದ್ಯಾರ್ಥಿಗಳಿಗೆ ಬಿಳ್ಕೊಡಿಗೆ ಕಾರ್ಯಕ್ರಮವನ್ನು ಹಮ್ಮಿಕೋಳ್ಳಲಾಗಿತ್ತು .
ಕಾರ್ಯಕ್ರಮದ ಅದ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಎಸ್ ಆರ್ ಅಂಜನಪ್ಪ ವಹಿಸಿ ಮಾತನಾಡುತ್ತ ವಿದ್ಯಾರ್ಥಿಗಳು ಶಿಸ್ತು , ಶಾಂತಿ ,ಬದ್ದತೆ ಅಳವಡಿಸಿಕೋಳ್ಳಬೇಕಂದು ಕರೆ ನೀಡಿದರು . ಅತಿಥಿಗಳಾಗಿ ಆಗಮಿಸಿದ ಪ್ರೊ ಭೀಮಣ್ಣ . ಸುಣಗಾರ ಮಾತನಾಡುತ್ತ ಹಿಂದಿನ ಕಾಲದಲ್ಲಿ ಮುಂದೆ ಗುರಿ ಇತ್ತು ಹಿಂದೆ ಗುರು ಇದ್ದರು , ಆದರೆ ಇಂದಿನ ವಿದ್ಯಾರ್ಥಿಗಳಿಗೆ ಗುರುನೂ ಬೇಡ ಗುರಿನೂ ಬೇಡ ಕೇವಲ ಕೈಯಲ್ಲಿ ಮೊಬೈಲ್ ಒಂದು ಇದ್ದರೆ ಏನು ಬೇಡ ಅನ್ನುವ ಸ್ತಿತಿಯಲ್ಲಿ ಇದ್ದಾರೆ ,ಹಿಗಿದ್ದರೆ ಮುಂದೆ ಬರುವ ದಿನಗಳು ಕಷ್ಟಅಂತಾ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ .ಮಂಜಣ್ಣ ,ರುದ್ರಪ್ಪ ,ಜಗದೀಶ , ರಾಮಣ್ಣ, ಶಾಂತಕುಮಾರಿ ,ಸೋಮಶೇಖರ, ರಾಜಕುಮಾರ ,ನರೇಶ ,ಸುರೇಶ , ಲತಾ ,ಕುಮುದಾ ಲತಾ ,ಜ್ಯೊತಿ ,ಗೌರಮ್ಮ ,ಉಪಸ್ತಿತರಿದ್ದರು.ಸ್ವಾಗತವನ್ನು ರುಪಾ ಮಾಡಿದರು ,ನಿರೂಪಣೆಯನ್ನು ಶರತ್ ನೇರವೆರಿಸಿದರು,ಕಿರಣ ವಂದನಾರ್ಪನೆಯನ್ನು ನಡೆಸಿಕೊಟ್ಟರು.