ಚಿಣ್ಣರ ಕಲರವದೊಂದಿಗೆ ಗುರು-ಪೂರ್ಣಿಮಗೆ ಸಾಕ್ಷಿಯಾದ ಶ್ರಿ ಸೋಮೇಶ್ವರ ವಿದ್ಯಾಲಯ
ದಾವಣಗೆರೆ: ವ್ಯಾಸರ ಜನನ ದಿನ ಹಾಗೂ ಆಷಾಢ ಮಾಸದ ಮೊದಲ ಹುಣ್ಣಿಮೆಯ ದಿನವಾದ ಇಂದು ನಗರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಶ್ರೀ ಸೋಮೇಶ್ವರ ಶಾಲೆಯಲ್ಲಿ ವಿಶಿಷ್ಟ ಹಾಗೂ ವೈವಿದ್ಯಮಯವಾಗಿ ಗುರು ಪೂರ್ಣಿಮೆಯನ್ನು ಆಚರಿಸಲಾಯಿತು.
ಇದಕ್ಕೆ ಸಾಕ್ಷಿಯಾಗಿ ಪೂರ್ವ ಪ್ರಾಥಮಿಕ ಹಂತದ ಮಕ್ಕಳು ವಿವಿಧ ರೀತಿಯ ಗುರುವರ್ಯರ ವೇಷಭೂಷಣ ಧರಿಸಿ ಗುರು ಒಬ್ಬ ಸರ್ವೋತ್ತಮ ಎಂಬುದನ್ನು ಸಾರಿದರೆ, ಶಾಲೆಯ 9 ಹಾಗೂ 10 ನೇ ತರಗತಿ ವಿದ್ಯಾರ್ಥಿನಿಯರು ಗುರು ಒಬ್ಬ ಸಾಕಾರಮೂರ್ತಿ ಎಂಬುದನ್ನು ತಮ್ಮ ಹಾಡಿನ ಮೂಲಕ ಮನರಂಜಿಸಿದರು. ಇನ್ನೂ 7ನೇ ತರಗತಿ ವಿದ್ಯಾರ್ಥಿನಿಯಾದ ಕು.ಶರಣ್ಯ ಎಂವಿ. ಗುರುಪೂರ್ಣಿಮಯ ಮಹತ್ವ ಹಾಗೂ ಹಿನ್ನೆಲೆಯನ್ನು ತಮ್ಮ ಭಾಷಣದ ಮೂಲಕ ತಿಳಿಸಿಕೊಟ್ಟರು. ಪೋಷಕರು ಅತ್ಯಂತ ಉತ್ಸಾಹಭರಿತರಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಶ್ರೀಮತಿ ಗಾಯತ್ರಿ ಮೇಡಂ ಅವರು ವಿದ್ಯಾರ್ಥಿಗಳ ಸಾಧನೆಗೆ ಗುರುವಿನ ಪಾತ್ರ ಅಮೋಘವಾದದ್ದು ಎಂದು ತಿಳಿಸಿದರೆ, ಶಾಲಾ ಪ್ರಾಚಾರ್ಯರಾದ ಶ್ರೀಮತಿ ಪ್ರಭಾವತಿ ಮೇಡಂ ರವರು ಸಮಾಜದಲ್ಲಿ ಗುರುವಿನ ಪಾತ್ರ ಹಾಗೂ ಗುರು ಒಬ್ಬ ತಂದೆಯಾಗಿ, ತಾಯಿಯಾಗಿ ಸ್ನೇಹಿತರಾಗಿ ಹೇಗೆ ವಿದ್ಯಾರ್ಥಿಗಳ ಸವೋತ್ತಮ ಅಭಿವೃದ್ಧಿಗೆ ಕಾರಣರಾಗುತ್ತಾರೆ ಎಂಬುದನ್ನು ತಿಳಿಸಿಕೊಟ್ಟರು ಹಾಗೂ ಈ ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಯಾದ ಹರೀಶ್ ಬಾಬು , ಮುಖ್ಯೋಪಧ್ಯಾಯರಾದ ಶ್ರೀಮತಿ ಮಾಲಾ ಮೇಡಂ, ಬೋಧಕ-ಬೋಧಕೇತರ ವರ್ಗವು ಸಹ ಭಾಗವಹಿಸಿತ್ತು.