transfer; ದಾವಣಗೆರೆ ಡಿ ಎಚ್ ಒ, ಆರ್ ಸಿ ಎಚ್ ಸೇರಿ ಒಂದೇ ದಿನ 600 ಕ್ಕೂ ಹೆಚ್ಚು ಆರೋಗ್ಯ ಇಲಾಖೆಯಲ್ಲಿ ವರ್ಗಾವಣೆ
ದಾವಣಗೆರೆ, ಆ.28: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೆಲವು ವೈದ್ಯಾಧಿಕಾರಿಗಳನ್ನು ವರ್ಗಾವಣೆಗೊಳಿಸಿ (transfer) ಆದೇಶ ಹೊರಡಿಸಿದೆ. ಈ ಕೆಳಕಂಡ ವೈದ್ಯಾಧಿಕಾರಿಗಳನ್ನು ಅವರ ಹೆಸರಿನ ಮುಂದೆ ಸೂಚಿಸಲಾಗಿರುವ ಹುದ್ದೆ/ಸ್ಥಳಕ್ಕೆ ವರ್ಗಾವಣೆ ಆದೇಶಿಸಲಾಗಿದೆ.
1. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ DHO , ದಾವಣಗೆರೆ – ಡಾ. ನಾಗರಾಜ್ ಇವರ ಜಾಗಕ್ಕೆ ಶಸ್ತ್ರಚಿಕಿತ್ಸಾ ತಜ್ಞರು, ಜಿಲ್ಲಾ ಆಸ್ಪತ್ರೆ ಹಾವೇರಿಗೆ ಡಾ. ಷಣ್ಮುಖಪ್ಪ. ಎಸ್. ಅವರನ್ನು ವರ್ಗಾವಣೆ ಮಾಡಲಾಗಿದೆ.
vachana; ಹಳ್ಳಿಮಕ್ಕಳಿಗೆ ವಚನ ನೃತ್ಯವನ್ನು ಮಾಡಿಸಬೇಕು: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
2. ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ, ದಾವಣಗೆರೆ ಇಲ್ಲಿನ ಅಂಕಿತ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಎಂ.ಕೆ ರುದ್ರಸ್ವಾಮಿ ಇವರ ಸ್ಥಳಕ್ಕೆ, ನಗರ ಕುಟುಂಬ ಕಲ್ಯಾಣ ಕೇಂದ್ರ, ದಾವಣಗೆರೆ ವೈದ್ಯಾಧಿಕಾರಿ, ಡಾ. ನಾಗರಾಜ್ ಜೆ. ಎಸ್ ಅವರನ್ನು ವರ್ಗಾವಣೆ ಮಾಡಲಾಗಿದೆ.
3. ಜಿಲ್ಲಾ ಆರ್.ಸಿ.ಹೆಚ್ ಆಫಿಸರ್ RCH, ದಾವಣಗೆರೆ ಗೆ ಕುಟುಂಬ ಕಲ್ಯಾಣ ಅಧಿಕಾರಿಗಳು, ದಾವಣಗೆರೆ ಡಾ.ರೇಣುಕಾ ಆರಾಧ್ಯ ಎ.ಎಂ. ಅವರನ್ನು ವರ್ಗಾವಣೆ ಮಾಡಲಾಗಿದೆ.
ಡಿ ಹೆ್ಚ್ ಓ ಡಾ; ನಾಗರಾಜ್ ಹಾಗೂ ಡಾ; ಮೀನಾಕ್ಷಿ ಇವರುಗಳಿಗೆ ಯಾವುದೇ ಸ್ಥಾನವನ್ನ ತೋರಿಸದೆ ವರ್ಗಾವಣೆ ಮಾಡಲಾಗಿದೆ.